
ವಿಟ್ಲ: ಮಕ್ಕಳು ವಿಶ್ವವನ್ನು ಬೆಳಗುವ ಜ್ಯೋತಿಯಾಗಬೇಕು. ವಿನಯ ವಿದ್ಯೆಯ ಜೀವಾಳವಾಗಿದ್ದು, ಪ್ರತಿಯೊಬ್ಬರಿಗೂ ಸಂಸ್ಕಾರಯುತ ಶಿಕ್ಷಣ ಲಭಿಸಬೇಕು ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಒಡಿಯೂರು ರಾಜಾಂಗಣದಲ್ಲಿ ಒಡಿಯೂರು ಗುರುದೇವ ವಿದ್ಯಾಪೀಠದ ಗುರುದೇವ ಗುರುಕುಲಗಳ ಗುರುಕುಲೋತ್ಸವ, ಗುರುದೇವ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕಲೋತ್ಸವ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಶಿಕ್ಷಕ ಶೇಖರ ಶೆಟ್ಟಿ ಬಾಯಾರು ಅವರ ಕವಿತಾಮೃತ ಪುಸ್ತಕ ಬಿಡುಗಡೆ ಮಾಡಲಾಯಿತು. ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಿತು. ಶೈಕ್ಷಣಿಕ ಸಾಧನೆಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸಾಧ್ವಿ ಮಾತಾನಂದಮಯಿ ಸಾನ್ನಿಧ್ಯ ವಹಿಸಿದ್ದರು. ಒಡಿಯೂರು ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲು, ಉದ್ಯಮಿ ವಾಮಯ್ಯ ಬಿ.ಶೆಟ್ಟಿ, ರೇವತಿ ವಾಮಯ್ಯ ಶೆಟ್ಟಿ, ಅಜಿತ್ ಕುಮಾರ್ ಪಂಗಳಂ, ಕಲ್ಪನಾ ಕೃಷ್ಣ ಶೆಟ್ಟಿ, ನೇತ್ರಾ ಶೆಟ್ಟಿ, ರೇಶ್ಮಾ ಶೆಟ್ಟಿ, ಚಂದ್ರಕಲಾ ಶೆಟ್ಟಿ, ಅಳಿಕೆಯ ನಿವೃತ್ತ ಶಿಕ್ಷಕ ಉದನೇಶ್ವರ ಭಟ್, ಮಾತೃ ಮಂಡಳಿ ಮುಖ್ಯಸ್ಥೆ ಉಮಾ ಭಾಗವಹಿಸಿದ್ದರು.
ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ರೇಣುಕಾ ಎಸ್.ರೈ ವರದಿ ವಾಚಿಸಿದರು. ಶಿಕ್ಷಕ ಶೇಖರ ಶೆಟ್ಟಿ ವಂದಿಸಿದರು.