ಸಾವು
(ಪ್ರಾತಿನಿಧಿಕ ಚಿತ್ರ)
ದಾವಣಗೆರೆ: ತಾಲ್ಲೂಕಿನ ಲಕ್ಕಮುತ್ತೇನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬುಧವಾರ ನಸುಕಿನಲ್ಲಿ ಕಾರಿಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಅರ್ಚಕರೊಬ್ಬರು ಮೃತಪಟ್ಟಿದ್ದಾರೆ.
ಯರಗುಂಟೆ ಗ್ರಾಮದ ಡಿ.ಎನ್. ಬಾಲಸುಬ್ರಮಣ್ಯಂ (54) ಮೃತಪಟ್ಟವರು. ಗ್ರಾಮದ ವೆಂಕಟೇಶ್ವರ ದೇಗುಲದಲ್ಲಿ ಇವರು ಅರ್ಚಕರಾಗಿದ್ದರು.
‘ಬಾಲಸುಬ್ರಮಣ್ಯಂ ಅವರು ಬೆಂಗಳೂರಿಗೆ ತೆರಳಲು ಬುಧವಾರ ನಸುಕಿನ 3.30ಕ್ಕೆ ಕಾರಿನಲ್ಲಿ ಮನೆಯಿಂದ ಹೊರಟಿದ್ದರು. ರಾಷ್ಟ್ರೀಯ ಹೆದ್ದಾರಿಯ ಲಕ್ಕಮುತ್ತೇನಹಳ್ಳಿ ಸಮೀಪ ಅತಿ ವೇಗವಾಗಿ ಬಂದ ವಾಹನವೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ’ ಎಂದು ಗ್ರಾಮಾಂತರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.