ADVERTISEMENT

ಹುಬ್ಬಳ್ಳಿ | ಸಚಿವ ಜಮೀರ್‌ ಅಹ್ಮದ್‌ ರಾಜೀನಾಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 15:37 IST
Last Updated 23 ಜೂನ್ 2025, 15:37 IST
ಹುಬ್ಬಳ್ಳಿಯ ಮಿನಿ ವಿಧಾನಸೌಧದ ಎದುರು ಸೋಮವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಹುಬ್ಬಳ್ಳಿಯ ಮಿನಿ ವಿಧಾನಸೌಧದ ಎದುರು ಸೋಮವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ‘ವಸತಿ ಇಲಾಖೆಯಿಂದ ಬಡವರಿಗೆ ಹಂಚಿಕೆಯಾಗಬೇಕಾಗಿದ್ದ ಮನೆಗಳನ್ನು, ಹಣ ಇದ್ದವರಿಗೆ ನೀಡುತ್ತೇವೆ ಎಂದಿರುವ ವಸತಿ ಸಚಿವ ಜಮೀರ್‌ ಅಹ್ಮದ್ ಖಾನ್‌ ತಕ್ಷಣ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿ ಸೋಮವಾರ ಬಿಜೆಪಿ ಕಾರ್ಯಕರ್ತರು ಮಿನಿವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.

‘ಭ್ರಷ್ಟ ಕಾಂಗ್ರೆಸ್‌ ಸರ್ಕಾರ ತೊಲಗಲಿ’, ‘ಭ್ರಷ್ಟ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಸತಿ ಸಚಿವರಿಗೆ ಧಿಕ್ಕಾರ’ ಎಂದು ಪ್ರತಿಭಟನಕಾರರು ಘೋಷಣೆ ಕೂಗಿದರು. ಬಡವರಿಗೆ ಹಂಚಿಕೆಯಾಗಬೇಕಿದ್ದ ಮನೆಗಳನ್ನು ಉಳ್ಳವರಿಗೆ ಹಂಚಿಕೆ ಮಾಡಲು ಹೊರಟಿರುವುದು ಭ್ರಷ್ಟಾಚಾರದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಸತೀಶ ಶೇಜವಾಡಕರ ಮಾತನಾಡಿ, ‘ವಸತಿ ಇಲಾಖೆಯಿಂದ ನಿರ್ಮಿಸಲಾದ ಮನೆಗಳನ್ನು ಹಣ ನೀಡಿದವರಿಗೆ ಮಾತ್ರ ನೀಡಲಾಗುವುದು ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿರುವ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದೆ. ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಳ್ಳುವ ಬದಲು, ಅವರಿಂದ ರಾಜೀನಾಮೆ ಪಡೆಯಬೇಕಿತ್ತು. ಕಾಂಗ್ರೆಸ್‌ ಸರ್ಕಾರದಲ್ಲಿ ಹಣ ನೀಡಿದರೆ ಮಾತ್ರ ಕೆಲಸಗಲು ಆಗುತ್ತವೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ’ ಎಂದರು.

ADVERTISEMENT

‘ಈ ಕುರಿತು ಆ ಪಕ್ಷದ ಹೈಕಮಾಂಡ್‌ ಸಹ ಮೌನ ವಹಿಸಿದ್ದು, ಅವರಿಗೂ ರಾಜ್ಯದಿಂದ ಹಣ ಹೋಗುತ್ತಿರುವ ಸಂಶಯವಿದೆ’ ಎಂದು ಆರೋಪಿಸಿದರು.

ಮುಕಂಡರಾದ ನಾರಾಯಣ ಜರತಾರಘರ, ರಾಧಾಬಾಯಿ ಸಫಾರೆ, ಪ್ರಭು ನವಲಗುಂದಮಠ, ಮಂಜು ಕಾಟಕರ  ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.