
ಪ್ರಜಾವಾಣಿ ವಾರ್ತೆಹುಬ್ಬಳ್ಳಿ: ಗೋವಾ ಸೇರಿದಂತೆ ವಿವಿಧೆಡೆ ಮನೆಗಳವು ಮಾಡಿದ್ದ ಇಲ್ಲಿನ ಈಶ್ವರ ನಗರದ ಗೇಬಿ ಫರ್ನಾಂಡಿಸ್ ಅವರನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ, 20 ಗ್ರಾಂ ಚಿನ್ನಾಭರಣ ಮತ್ತು ಬೈಕ್ ವಶಪಡಿಸಿಕೊಂಡಿದ್ದಾರೆ.
ಗೋವಾ ಮೂಲದ ಆರೋಪಿ, ಇತ್ತೀಚೆಗೆ ತಾರಿಹಾಳದಲ್ಲಿರುವ ಮನೆಯೊಂದರ ಬಾಗಿಲಿನ ಬೀಗ ಮುರಿದು ಒಳಗೆ ನುಗ್ಗಿ ಕಳವು ಮಾಡಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.