ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಶುಕ್ರವಾರವೂ ಮಳೆ ಜೋರಾಗಿ ಸುರಿದು ರೈತರಲ್ಲಿ ಮಂದಹಾಸ ಮೂಡಿಸಿತು.
ಪಟ್ಟಣದಲ್ಲಿ ಕಡಿಮೆ ಮಳೆ ಸುರಿದರೆ ಗ್ರಾಮೀಣ ಪ್ರದೇಶದಲ್ಲಿ ಜೋರಾಗಿ ಮಳೆ ಸುರಿಯಿತು. ಸಂಜೆಯವರೆಗೂ ತುಂತುರು ಮಳೆ ಮುಂದುವರೆಯಿತು. ತೇವಾಂಶ ಕೊರತೆಯಿಂದ ಕಮರುತ್ತಿದ್ದ ಬೆಳೆಗಳಿಗೆ ಈ ಮಳೆ ಜೀವ ನೀಡಿದಂತಾಗಿದೆ. ಮುಂಗಾರು ಬೆಳೆಗಳಾದ ಮೆಕ್ಕೆಜೋಳ, ಹೆಸರು, ಹತ್ತಿ ಚೇತರಿಸಿಕೊಳ್ಳುವಂತಾಗಿದ್ದು ರೈತರು ಸಂತಸಗೊಂಡಿದ್ದು ಮುಂದಿನ ಕೃಷಿ ಚಟುವಟಿಕೆಗಳಿಗೆ ಅಣಿಯಾಗಿದ್ದು ಕಂಡು ಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.