
ಪ್ರಜಾವಾಣಿ ವಾರ್ತೆ
ಲಕ್ಷ್ಮೇಶ್ವರ: ತಾಲ್ಲೂಕಿನ ಅಮರಾಪುರ ಗ್ರಾಮದಿಂದ ಸೂರಣಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಎರಡೂ ಬದಿಯಲ್ಲಿ ಮುಳ್ಳಿನ ಕಂಟಿಗಳು ಬೆಳೆದಿದ್ದು, ಅಪಘಾತ ಸಂಭವಿಸುವ ಭೀತಿಯಲ್ಲಿ ಸಾರ್ವಜನಿಕರು ಸಂಚರಿಸುವಂತಾಗಿದೆ.
ರಸ್ತೆಯ ಎರಡೂ ಬದಿಯಲ್ಲಿ ಬೆಳೆದಿರುವ ಮುಳ್ಳಿನ ಕಂಟಿಗಳಿಂದ ಎದುರು ಬರುವ ವಾಹನಗಳು ಕಾಣದಂತಾಗಿ ಅನೇಕ ಅಪಘಾತ ಸಂಭವಿಸಿವೆ. ಮುಳ್ಳಿನ ಕಂಟಿಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತೆರವುಗೊಳಿಸಬೇಕು ಎಂದು ಸೂರಣಗಿ ಗ್ರಾಮದ ನಿವಾಸಿ ಶರಣಪ್ಪ ಇಚ್ಚಂಗಿ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.