
ಚಿಂಚೋಳಿ: ರಂಗ ನೃಪತುಂಗ ಪ್ರಶಸ್ತಿಗೆ ಒಟ್ಟು 25 ಮಂದಿ ಕಲಾವಿದರನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಚಿಂಚೋಳಿ ತಾಲ್ಲೂಕಿನ ನಾಲ್ವರು ಕಲಾವಿದರು ಆಯ್ಕೆಯಾಗಿದ್ದಾರೆ ಎಂದು ಸೇಡಂನ ನೃಪತುಂಗ ಹವ್ಯಾಸಿ ಕಲಾವಿದರ ನಾಟ್ಯ ಸಂಘದ ಅಧ್ಯಕ್ಷ ಸಂಗಣ್ಣ ಅಲ್ದಿ ತಿಳಿಸಿದರು.
ಪಟ್ಟಣದಲ್ಲಿ ಮಂಗಳವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಕುರಿತು ಪತ್ರ ನೀಡಿ ಕಲಾವಿದರಿಗೆ ಸನ್ಮಾನಿಸಿ ಕಾರ್ಯಕ್ರಮಕ್ಕೆ ಆಹ್ವಾನ ಪತ್ರ ನೀಡಿದರು.
‘ಹಿರಿಯ ರಂಗಕರ್ಮಿ ಶಾಮರಾವ ಕೊರವಿ, ನಾಟಕಕಾರ ಶಂಕರ ಹೂವಿನ ಹಿಪ್ಪರಗಿ, ಕಲಾವಿದರಾದ ಗೋಪಾಲ ಬಾಜೇಪಳ್ಳಿ ಮತ್ತು ಚಿಮ್ಮಾಯಿದಲಾಯಿ ಗ್ರಾಮದ ಧರ್ಮಣ್ಣ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಹಾಗೂ ಸಂಘದ ದ್ವಿತೀಯ ವಾರ್ಷಿಕೋತ್ಸವ ಅ. 22ರಂದು ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ರಾಜಶೇಖರ ಮಂಗಲಗಿ, ಸ್ಥಳೀಯ ಕಲಾವಿದರಾದ ಪ್ರಶಾಂತ ಕಟ್ಟಿ, ರವಿಗೌಡ, ರಾಮಯ್ಯಸ್ವಾಮಿ, ಶಿಕ್ಷಕ ಮಲ್ಲಪ್ಪ ಕರಕಟಿ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.