
ಕಮಲಾಪುರ: ಪಟ್ಟಣದ ಶ್ರೀಸಿದ್ದರಾಮೇಶ್ವರ ಆಸ್ಪತ್ರೆಯಲ್ಲಿ ಕಲಬುರಗಿಯ ಶ್ರೀ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆ, ಇಂಟರನ್ಯಾಶನಲ್ ಇಂಡಿಯಾ ಲಿಮಿಟೆಡ್ ನ ಹರ್ಬಲೈಫ್ ಸಂಸ್ಥೆ ಹಾಗೂ ನವದೆಹಲಿಯ ನೇತ್ರಮ್ ಐ ಫೌಂಡೇಶನ್ ವತಿಯಿಂದ ಮಂಗಳವಾರ ಉಚಿತ ಕಣ್ಣಿನ ತಪಾಸಣೆ, ಹಾಗೂ ಚಿಕಿತ್ಸೆ ನೀಡಲಾಯಿತು.
ಈ ಚಿಕಿತ್ಸೆ ಶಿಬಿರದಲ್ಲಿ 170 ಜನರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು.
ದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದ 350 ಜನರಿಗೆ ರಕ್ತದೊತ್ತಡ ಮಧುಮೇಹ ಪರೀಕ್ಷೆ ಜೊತೆಗೆ, ಕಣ್ಣಿನ ಅಕ್ಷಿಪಟದ ಪರೀಕ್ಷೆ, ಪೊರೆಯ ಪರೀಕ್ಷೆ, ಗ್ಲುಕೊಮಾದ, ಚಿಕಿತ್ಸೆ ನೀಡಲಾಯಿತು. ಕಣ್ಣಿನ ಪಾಪೆಯ, ಕಣ್ಣಿನ ಸಂಬಂಧಿ ಕಾಯಿಲೆ ಪರೀಕ್ಷೆ ನಡೆಸಲಾಯಿತು. ಅಗತ್ಯ ಇದ್ದವರಿಗೆ ಔಷಧಿ ಹಾಗೂ 170 ಜನರಿಗೆ ಕನ್ನಡಕ ವಿತರಣೆ ಮಾಡಲಾಯಿತು. ಐವರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುವ ಅಗತ್ಯವಿದ್ದು ಅವರನ್ನು ಕಲಬುರಗಿ ಶ್ರೀಸಿದ್ಧರಾಮೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಶ್ರೀಸಿದ್ಧರಾಮೇಶ್ವರ ಕಣ್ಣಿನ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಸಿದ್ಧಲಿಂಗ ರೆಡ್ಡಿ ತಿಳಿಸಿದರು.
ನೇತ್ರ ಶಾಸ್ತ್ರಜ್ಞ ಡಾ.ನಾಗರಾಜ ಗವಿಮಠ, ನೇತ್ರ ರೋಗ ತಜ್ಞೆ ಡಾ.ರಚನಾ, ನೇತ್ರಮ್ ಆಯ್ ಫೌಂಡೇಶನ್ ಮುಖ್ಯಸ್ಥ ಡಾ.ರಾಹುಲ ತಿವಾರಿ, ಡಾ.ಆನಂದ ಹಿರೇಮಠ, ಡಾ.ವಿಶ್ವನಾಥ ರೆಡ್ಡಿ, ಡಾ. ರಾಜೇಶ್ರೀ ರೆಡ್ಡಿ, ಡಾ.ರಾಜೇಶ್ವರಿ ರೆಡ್ಡಿ ರೋಗಿಗಳಿಗೆ ಚತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು. ಗಣ್ಯರಾದ ಶಂಕರರಾವ ಬೇನೂರ,
ಸಂಜುಕುಮಾರ ದೋಶೆಟ್ಟಿ, ರವಿಂದ್ರ ಬಿ.ಕೆ. ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.