ADVERTISEMENT

ಕಲಬುರಗಿ: 3 ಕೋಟಿ ಸಸಿ ನೆಡುವ ‘ಹಸಿರು ಪಥ’ಕ್ಕೆ ಚಾಲನೆ

ರಾಜ್ಯದ ಅರಣ್ಯ ಪ್ರದೇಶವನ್ನು ಶೇ 21ರಿಂದ ಶೇ 33ಕ್ಕೆ ಹೆಚ್ಚಿಸಲು ಖರ್ಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 6:04 IST
Last Updated 6 ಜುಲೈ 2025, 6:04 IST
<div class="paragraphs"><p>ಅರಣ್ಯ ಇಲಾಖೆ&nbsp;ಕಲಬುರಗಿಯಲ್ಲಿ ಶನಿವಾರ ಆಯೋಜಿಸಿದ್ದ ‘ಹಸಿರು ಪಥ’ ಯೋಜನೆಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವ ಈಶ್ವರ ಖಂಡ್ರೆ ಅವರು ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ವಿಧಾನಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಜಗದೇವ ಗುತ್ತೇದಾರ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಭಾಗವಹಿಸಿದ್ದರು</p></div>

ಅರಣ್ಯ ಇಲಾಖೆ ಕಲಬುರಗಿಯಲ್ಲಿ ಶನಿವಾರ ಆಯೋಜಿಸಿದ್ದ ‘ಹಸಿರು ಪಥ’ ಯೋಜನೆಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವ ಈಶ್ವರ ಖಂಡ್ರೆ ಅವರು ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ವಿಧಾನಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಜಗದೇವ ಗುತ್ತೇದಾರ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಭಾಗವಹಿಸಿದ್ದರು

   

ಕಲಬುರಗಿ: ರಾಜ್ಯದಾದ್ಯಂತ ಮೂರು ಕೋಟಿ ಸಸಿ ನೆಡುವ ಹಾಗೂ ಬಿಸಿಲಿನ ತಾಪ ಹೆಚ್ಚಿರುವ ಕಲ್ಯಾಣ ಕರ್ನಾಟಕದಲ್ಲಿ 28 ಲಕ್ಷ ಸಸಿಗಳನ್ನು ರಸ್ತೆ ಬದಿ, ಸರ್ಕಾರಿ ಭೂಮಿಯಲ್ಲಿ ನೆಟ್ಟು ಪೋಷಿಸುವ ‘ಹಸಿರು ಪಥ’ ಯೋಜನೆಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ನಗರದಲ್ಲಿ ಚಾಲನೆ ನೀಡಿದರು.

ಅರಣ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, ನಗರಾಭಿವೃದ್ಧಿ ಇಲಾಖೆಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ‘ರಾಜ್ಯದಲ್ಲಿ ಸರಾಸರಿ ಅರಣ್ಯ ಪ್ರದೇಶ ಶೇ 21ರಷ್ಟಿದ್ದು, ಅದನ್ನು ಜಾಗತಿಕ ಮಾನದಂಡವಾದ ಶೇ 33ಕ್ಕೆ ಏರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ಸರ್ಕಾರದೊಂದಿಗೆ ಕೈ ಜೋಡಿಸಬೇಕು’ ಎಂದು ಕೋರಿದರು. 

ADVERTISEMENT

 ‘ದಟ್ಟ ಅರಣ್ಯ ಪ್ರದೇಶಗಳನ್ನು ಹೊಂದಿದ್ದ ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ಮರಗಳು ರಸ್ತೆ ಬದಿ ಮಾತ್ರ ಕಂಡು ಬರುತ್ತಿವೆ. ಒಳಭಾಗದಲ್ಲಿ ಇಡೀ ಅರಣ್ಯಗಳು ಬೋಳಾಗುತ್ತಿವೆ’ ಎಂದು ಖೇದ ವ್ಯಕ್ತಪಡಿಸಿದರು.

ಅರಣ್ಯ, ಪರಿಸರ ಸಚಿವ ಈಶ್ವರ ಖಂಡ್ರೆ ಮಾತನಾಡಿ, ನೆಟ್ಟ ಸಸಿಗಳ ಬಗ್ಗೆ ನಿಗಾ ಇರಿಸಲು ಜಿಯೊ ಟ್ಯಾಗಿಂಗ್ ಮಾಡಲಾಗುವುದು. ಕಲ್ಯಾಣ ಕರ್ನಾಟಕದಲ್ಲೇ ಪ್ರಸಕ್ತ ವರ್ಷ 28 ಲಕ್ಷ ಸಸಿಗಳನ್ನು ನೆಡಲಾಗುವುದು. ಬೇಗ ಬೆಳೆಯುವ ದೊಡ್ಡ ಸಸಿಗಳನ್ನು ರಾಜಮಂಡ್ರಿಯಿಂದ ತರಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.