ಕಲಬುರಗಿ: ನಗರದಲ್ಲಿ ಸೋಮವಾರ ತಡರಾತ್ರಿ ಧಾರಾಕಾರ ಮಳೆ ಸುರಿಯಿತು.
ರಾತ್ರಿ 9 ಗಂಟೆ ವೇಳೆಗೆ ಅರ್ಧ ಗಂಟೆ ಬಿರುಸಿನ ಮಳೆಯಾಗಿತ್ತು. ಬಳಿಕ ಹನಿಗಳು ಉದುರುತ್ತಿದ್ದವು. ನಂತರ ಹಂತ ಹಂತವಾಗಿ ವೇಗ ಪಡೆದ ಮಳೆ ಮತ್ತೆ ರಾತ್ರಿ 11.40ರ ಹೊತ್ತಿಗೆ ಧಾರಾಕಾರವಾಗಿ ಸುರಿಯಿತು.
ನಗರದ ರಸ್ತೆಗಳ ಮೇಲೆ ನೀರು ಹರಿಯಿತು. ನಗರದ ಅನ್ನಪೂರ್ಣ ಕ್ರಾಸ್ ಕಡೆಗೆ ಜಗತ್ ವೃತ್ತದ ಕಡೆಯಿಂದ ಅಪಾರ ಪ್ರಮಾಣದ ಮಳೆ ನೀರು ನುಗ್ಗಿ ಬಂತು. ನಗರದ ಪಿಡಿಎ ಎಂಜಿನಿಯರ್ ಕಾಲೇಜು ಹಾಗೂ ಹಳೇ ಜೇವರ್ಗಿ ರಸ್ತೆಯಲ್ಲಿನ ರೈಲ್ವೆ ಕೆಳ ಸೇತುವೆಯಡಿ ನೀರು ಜಮಾಯಿಸಿದ್ದರಿಂದ ವಿರಳವಾಗಿ ಸಂಚರಿಸುತ್ತಿದ್ದ ವಾಹನಗಳಿಗೆ ತೊಂದರೆಯಾಯಿತು.
ಗಾಳಿ ಸಹಿತ ಮಳೆ ಸುರಿದಿದ್ದರಿಂದ ವಾತಾವರಣ ತಂಪೇರಿದ್ದು, ಚಳಿಯ ಅನುಭವವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.