ADVERTISEMENT

ಸೋಮವಾರಪೇಟೆ: ಜೇಸಿ ಸಂಸ್ಥೆಯಿಂದ ಮ್ಯಾರಥಾನ್

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 4:25 IST
Last Updated 12 ನವೆಂಬರ್ 2025, 4:25 IST
ಸೋಮವಾರಪೇಟೆ ಜೇಸಿಐ ಸಂಸ್ಥೆಯಿಂದ ಜೇಸಿ ಸಪ್ತಾಹದ ಅಂಗವಾಗಿ ನಡೆದ ಮ್ಯಾರಥಾನ್‌ನ್ನು ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಹರಪಳ್ಳಿ ರವೀಂದ್ರ ಚಾಲನೆ ನೀಡಿದರು. ಜಗದಾಂಭ, ಮಾಯಾ ಗಿರೀಶ್, ವಿನುತ ಜೊತೆಗಿದ್ದರು
ಸೋಮವಾರಪೇಟೆ ಜೇಸಿಐ ಸಂಸ್ಥೆಯಿಂದ ಜೇಸಿ ಸಪ್ತಾಹದ ಅಂಗವಾಗಿ ನಡೆದ ಮ್ಯಾರಥಾನ್‌ನ್ನು ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಹರಪಳ್ಳಿ ರವೀಂದ್ರ ಚಾಲನೆ ನೀಡಿದರು. ಜಗದಾಂಭ, ಮಾಯಾ ಗಿರೀಶ್, ವಿನುತ ಜೊತೆಗಿದ್ದರು   

ಸೋಮವಾರಪೇಟೆ: ಜೇಸಿಐ ಪುಷ್ಪಗಿರಿ ಸೋಮವಾರಪೇಟೆ ಘಟಕದಿಂದ ಈಚೆಗೆ ಜೇಸಿ ಸಪ್ತಾಹದ ಅಂಗವಾಗಿ ಮಕ್ಕಳ ಮ್ಯಾರಥಾನ್ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಹರಪಳ್ಳಿ ರವೀಂದ್ರ ಮಾತನಾಡಿ, ‘ಮ್ಯಾರಥಾನ್ ಕಾರ್ಯಕ್ರಮ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸುವುದರೊಂದಿಗೆ ದೈಹಿಕವಾಗಿಯೂ ಸಧೃಡರನ್ನಾಗಿಸುತ್ತದೆ. ಜೇಸಿ ಸಂಸ್ಥೆ ಸದಾ ಸಮಾಜಮುಖಿ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು, ಜೇಸಿ ಸಪ್ತಾಹದಂತಹ ಕಾರ್ಯಕ್ರಮ ಮೂಲಕ ಯುವ ಪೀಳಿಗೆಗೆ ಉತ್ತಮ ಪ್ರೇರಣೆ ನೀಡುತ್ತಿದೆ’ ಎಂದರು.

ಜೇಸಿಐ ಅಧ್ಯಕ್ಷೆ ಜಗದಾಂಭ ಗುರುಪ್ರಸಾದ್, ಪದಾಧಿಕಾರಿಗಳಾದ ಮಾಯಾ ಗಿರೀಶ್, ವಿನುತ ಸುದೀಪ್, ಜ್ಯೋತಿ ರಾಜೇಶ್, ರಾಜೇಶ್, ವಿನೋದ್ ಜಯರಾಮ್ ಇದ್ದರು.

ADVERTISEMENT

ಬೆಳಿಗ್ಗೆ 10.30ರಿಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿಧಾನ ಸೈಕಲ್ ಹಾಗೂ ಬೈಕ್ ಚಾಲನ ಸ್ಪರ್ಧೆ, ಹಿಂದಕ್ಕೆ ವಾಹನ ಚಾಲಿಸುವ ಸ್ಪರ್ಧೆ, ನಂಜಮ್ಮ ಸಮುದಾಯ ಭವನದಲ್ಲಿ ಪೂರ್ವಿಕ ಸಂಗೀತ ರಸಸಂಜೆ ನಡೆಯಿತು.

ಸೋಮವಾರ ಮಹಿಳಾ ಸಮಾಜದಲ್ಲಿ ಮೈಸೂರು ಜೆಎಸ್ಎಸ್ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರುಗಳಿಂದ ವೈದ್ಯಕೀಯ ಆರೋಗ್ಯ ತಪಸಣಾ ಶಿಬಿರ ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.