
ಬಂಗಾರಪೇಟೆ: ‘ಕಾರಹಳ್ಳಿ, ಮರಗಲ್ ಮತ್ತು ಯಳಬುರ್ಗಿ ಕೆರೆಗಳಿಗೆ ಕೆ.ಸಿ ವ್ಯಾಲಿ ನೀರು ಹರಿಸದಿದ್ದರೆ ಮುಂದಿನ ವಿಧಾನಸಭೆ ಚುನಾವಣೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಾಮಗಳ ಮತ ಕೇಳಲು ಬರುವುದಿಲ್ಲ’ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ಭರವಸೆ ನೀಡಿದರು.
ತಾಲ್ಲೂಕಿನ ಕಾರಹಳ್ಳಿಯಲ್ಲಿ ಬುಧವಾರ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕೆ.ಸಿ ವ್ಯಾಲಿ ನೀರನ್ನು ಹರಿಸಲು ಪೈಪ್‌ಲೈನ್ ಕಾಮಗಾರಿ ಮುಗಿಸಿದ್ದು, ಇಷ್ಟರಲ್ಲಿ ನೀರು ಹರಿಸುವುದು ಮಾತ್ರ ಬಾಕಿ ಇದೆ. ಕ್ಷೇತ್ರದಲ್ಲಿನ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ನೀರಿನ ವ್ಯವಸ್ಥೆ ಮಾಡುವ ಉದ್ದೇಶದಿಂದ ನೀರು ಕೆರೆಗಳಿಗೆ ಹರಿಸಿದರೆ ಮತ್ತಷ್ಟು ವ್ಯವಸಾಯದಲ್ಲಿ ಪ್ರಗತಿ ಸಾಧಿಸಬಹುದು. ಕಾರಹಳ್ಳಿ ಗ್ರಾ.ಪಂ.ಯನ್ನು ಪುರಸಭೆಯೊಂದಿಗೆ ವಿಲೀನ ಮಾಡುವುದಿಲ್ಲ ಎಂದು ಭರವಸೆ ನೀಡಿದರು. ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಕಾರಹಳ್ಳಿ ಗ್ರಾಮವನ್ನು ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿ ಕಾರ್ಯಾಲಯದ ನೂತನ ಕಟ್ಟಡವನ್ನು ನಿರ್ಮಾಣ ಮಾಡಲು ಶಾಸಕರ ವಿಶೇಷ ಅನುದಾನದಲ್ಲಿ ₹4ಲಕ್ಷ ಮಂಜೂರು ಮಾಡಲಾಗಿದೆ. ಆದರೆ, ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಅನುದಾನ ಹಿಂಪಡೆಯುವುದಾಗಿ ಎಚ್ಚರಿಸಿದರು.
ಸಭೆಯಲ್ಲಿ ಗ್ರಾ.ಪಂ ಅಧ್ಯಕ್ಷ ಬಿ.ಶ್ರೀನಿವಾಸ್, ಉಪಾಧ್ಯಕ್ಷೆ ಯಲ್ಲಮ್ಮ, ಅಮೀಬ್, ವೆಂಕಟರಾಜಮ್ಮ, ಮಮತ, ಸೀತಮ್ಮ, ನಾಗರತ್ನಮ್ಮ ಅಂಜಿನಪ್ಪ, ರಮೇಶ್.ಜಿ, ರಮೇಶ್.ಇ, ಮಂಜುನಾಥ, ಕಾವ್ಯ, ಚಿನ್ನಿವೆಂಕಟೇಶ್, ಮೇಸ್ತ್ರಿ ಶ್ರೀನಿವಾಸ್, ಇ.ಒ ರವಿಕುಮಾರ್, ಪಿಡಿಒ ವೇಣು, ಸಿಡಿಪಿಒ ಮುನಿರಾಜು, ಹಿರಿಯ ಸಹಾಯಕ ನಿರ್ದೇಶಕ ಶಿವಾರೆಡ್ಡಿ, ಪ್ರತಿಭಾ, ಎಇಇ ರವಿಕುಮಾರ್, ಸುಕುಮಾರ್ ರಾಜು, ರವಿಚಂದ್ರ, ಸೂರ್ಯ ಪ್ರಸಾದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.