ADVERTISEMENT

ಸ್ಮಶಾನದಲ್ಲಿ ಮೌಢ್ಯ ವಿರೋಧಿ ಸಂಕಲ್ಪ ದಿನ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 5:53 IST
Last Updated 7 ಡಿಸೆಂಬರ್ 2025, 5:53 IST
ಮೌಢ್ಯ ತೊರೆದು ವೈಜ್ಞಾನಿಕ ಮನೋಭಾವ ಬೆಳಸಲು ಕೋಲಾರದ ಸ್ಮಶಾನದಲ್ಲಿ ಶನಿವಾರ ದಲಿತ ಮುಖಂಡರು ಮೌಢ್ಯ ವಿರೋಧಿ ಸಂಕಲ್ಪ ದಿನ ಆಚರಿಸಿದರು
ಮೌಢ್ಯ ತೊರೆದು ವೈಜ್ಞಾನಿಕ ಮನೋಭಾವ ಬೆಳಸಲು ಕೋಲಾರದ ಸ್ಮಶಾನದಲ್ಲಿ ಶನಿವಾರ ದಲಿತ ಮುಖಂಡರು ಮೌಢ್ಯ ವಿರೋಧಿ ಸಂಕಲ್ಪ ದಿನ ಆಚರಿಸಿದರು    

ಕೋಲಾರ: ಮೂಢನಂಬಿಕೆ ಹಾಗೂ ಕಂದಾಚಾರ ತೊರೆದು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಸಹಬಾಳ್ವೆ ನಡೆಸುವ ಕುರಿತು ಜಾಗೃತಿ ಮೂಡಿಸಲು ಮಾನವ ಬಂಧುತ್ವ ವೇದಿಕೆ ಹಾಗೂ ವಿವಿಧ ದಲಿತ ಸಂಘಟನೆಗಳ ಸಮ್ಮುಖದಲ್ಲಿ ಶನಿವಾರ ಮೌಢ್ಯ ವಿರೋಧಿ ಸಂಕಲ್ಪ ದಿನ ಆಚರಿಸಲಾಯಿತು.

ನಗರದ ಗಾಂಧಿನಗರದ ರುದ್ರಭೂಮಿಯಲ್ಲಿ ಜಮಾವಣೆಗೊಂಡ ದಲಿತ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಮೌಢ್ಯ ತೊರೆದು ಮದುವೆಯಾದ, ರಾಹುಕಾಲದಲ್ಲಿ ತಾಳಿ ಕಟ್ಟಿದ, ನಾಮಕರಣ ಮಾಡಿದ ಮುಂತಾದ ಅನುಭವ ನೆನಪುಗಳನ್ನು ಹಂಚಿಕೊಂಡರು.

ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಪರಿನಿರ್ವಾಣ ದಿನಾಚರಣೆ ದಿನವನ್ನು ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ್ ಜಾರಕಿಹೊಳಿ ಅವರು ಮೌಢ್ಯ ವಿರೋಧಿ ಸಂಕಲ್ಪ ದಿನವಾಗಿ ಆಚರಿಸುವ ಮೂಲಕ ರಾಜ್ಯದಾದ್ಯಂತ ಜಾಗೃತಿ ಮೂಡಿಸುತ್ತಿದ್ದಾರೆ.

ADVERTISEMENT

ಕಾರ್ಯಕ್ರಮದಲ್ಲಿ ದಲಿತ ಮುಖಂಡ ವೆಲಗಲಬುರ್ರೆ ಮುನಿಯಪ್ಪ, ಪಂಡಿತ್ ಮುನಿವೆಂಕಟಪ್ಪ, ವಕ್ಕಲೇರಿ ರಾಜಪ್ಪ, ಗಾಂಧೀನಗರ ನಾರಾಯಣಸ್ವಾಮಿ, ಬೆಳಮಾರನಹಳ್ಳಿ ಆನಂದ್, ಐಪಲ್ಲಿ ನಾರಾಯಣಸ್ವಾಮಿ ಅವರು ಮೌಢ್ಯ ತೊರೆದು ವೈಜ್ಞಾನಿಕವಾಗಿ ಆಲೋಚನೆ ಮಾಡುವುದರ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾನವ ಬಂಧುತ್ವ ವೇದಿಕೆ ಜಿಲ್ಲಾಧ್ಯಕ್ಷ ಬೀರಮಾನಹಳ್ಳಿ ಆಂಜಿನಪ್ಪ, ದಸಂಸ ಜಿಲ್ಲಾ ಸಂಚಾಲಕ ಹಾರೋಹಳ್ಳಿ ರವಿ, ಬಿ.ಶ್ರೀರಂಗ, ಬೀರಮಾನಹಳ್ಳಿ ವಿಜಯಕುಮಾರ್, ಮಂಜುಳಾ ನಾಗರಾಜ್, ಪಾಡಿಗಾನಹಳ್ಳಿ ರಾಮಾಂಜಿ, ಅಬ್ಬಿಣಿ ನಾಗರಾಜ್, ಮಾರ್ಜೇನಹಳ್ಳಿ ಬಾಬು, ಸಿ.ವಿ.ನಾಗರಾಜ್, ಬಂಗಾರಪೇಟೆ ಲಕ್ಷ್ಮಮ್ಮ, ಸಂಗಸಂದ್ರ ವಿಜಯ್ ಕುಮಾರ್, ವಿ.ಎಂ.ಸಂಘರ್ಷ, ವರದೇನಹಳ್ಳಿ ವೆಂಕಟೇಶ್, ಈನೆಲ ಈಜಲ ವೆಂಕಟಾಚಲಪತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.