ADVERTISEMENT

ಅಳವಂಡಿ: ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 15:34 IST
Last Updated 16 ಜೂನ್ 2025, 15:34 IST
ಕೊಪ್ಪಳದ ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಶಾಸಕ ರಾಘವೇಂದ್ರ ಹಿಟ್ನಾಳ ಭೂಮಿಪೂಜೆ ನೆರವೇರಿಸಿದರು
ಕೊಪ್ಪಳದ ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಶಾಸಕ ರಾಘವೇಂದ್ರ ಹಿಟ್ನಾಳ ಭೂಮಿಪೂಜೆ ನೆರವೇರಿಸಿದರು    

ಅಳವಂಡಿ: ಕೊಪ್ಪಳ ತಾಲ್ಲೂಕಿನ ಗೊಂಡಬಾಳ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಶಾಸಕ ರಾಘವೇಂದ್ರ ಹಿಟ್ನಾಳ ಭೂಮಿಪೂಜೆ ನೆರವೇರಿಸಿದರು. 

ಬೆಳವಿನಾಳ, ಹಾಲವರ್ತಿ, ಲಾಚನಕೇರಿ, ಚಿಕ್ಕಬಗನಾಳ, ಕರ್ಕಿಹಳ್ಳಿ, ಹ್ಯಾಟಿ, ಹೊಸ ಗೊಂಡಬಾಳ, ಹೊಸಳ್ಳಿ ಹಾಗೂ ಬಹದ್ದೂರ್ ಬಂಡಿ ಗ್ರಾಮಗಳಲ್ಲಿ ಅಂದಾಜು ₹14.50 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿವೆ.

ಬಳಿಕ ಮಾತನಾಡಿದ ಅವರು ‘ಕ್ಷೇತ್ರದಲ್ಲಿನ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿ ಹದಗೆಟ್ಟಿರುವ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಅನುದಾನ ತರಲಾಗುತ್ತಿದೆ. ಈಗಾಗಲೇ ಶೇ 80ರಷ್ಟು ರಸ್ತೆಗಳ ಅಭಿವೃದ್ಧಿ ಪ್ರಗತಿಗಲ್ಲಿವೆ. ಇನ್ನುಳಿದ ರಸ್ತೆಗಳ ಅಭಿವೃದ್ಧಿಗೂ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಪಕ್ಷದ ಮುಖಂಡರಾದ ಗೂಳಪ್ಪ ಹಲಗೇರಿ, ಪ್ರಸನ್ನ ಗಡಾದ, ಬಾಲಚಂದ್ರನ್, ಹೇಮಣ್ಣ ದೇವರಮನಿ, ಶರಣಪ್ಪ ಸಜ್ಜನ್, ಹನಮೇಶ್ ಹೊಸಳ್ಳಿ, ರವಿ ಕುರಗೋಡ, ಬನ್ನೇಪಗೌಡ, ತೋಟಪ್ಪ ಕಾಮನೂರ, ಜಗದೀಶ್ ಕರ್ಕಿಹಳ್ಳಿ, ಮಂಜುನಾಥ ಗೊಂಡಬಾಳ, ತಹಶೀಲ್ದಾರ್‌ ವಿಠ್ಠಲ ಚೌಗುಲಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.