
ಕನಕಗಿರಿ: ‘ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ಧಾರ್ಮಿಕ ಶಿಕ್ಷಣದ ಜತೆಗೆ ಸನ್ನಡತೆ, ಮಾನವೀಯ ಮೌಲ್ಯಗಳನ್ನು ತಿಳಿಸಿಕೊಡಬೇಕು’ ಎಂದು
ಬೆಂಗಳೂರಿನ ಧಾರ್ಮಿಕ ವಿದ್ವಾಂಸ ಮುಫ್ತಿ ನಿಜಾಮುದ್ದೀನ್ ಸಾಹೇಬ ತಿಳಿಸಿದರು.
ಇಲ್ಲಿನ ಮದೀನಾ ಮಸೀದಿಯ ಆವರಣದಲ್ಲಿ ಈಚೆಗೆ ಆಯೋಜಿಸಿದ್ದ ಕುರಾನ್ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸಾಮಾಜಿಕ ಪಿಡುಗಗಳ ವಿರುದ್ದ ಯುವ ಜನಾಂಗ ಹೋರಾಟ ನಡೆಸಬೇಕು’ ಎಂದು ಹೇಳಿದರು.
ಮೌಲಾನಗಳಾದ ಮುಪ್ತಿ ಮಹ್ಮದ ಅಬ್ಜಲ್ ಹುಸೇನ, ಮಹ್ಮದ ಮುಪ್ತಿ ಇಸ್ಮಾಯಿಲ್ ಸಾಹೇಬ್, ಉಸ್ಮಾನಸಾಬ, ನೂರಾನಿ ಮಸೀದಿಯ ಆಫೀಜ್ ಅಬ್ದುಲಸಾಬ ಕ್ವಾಟಿ
ಅವರು ಕುರಾನ್ ಹಾಗೂ ಹದೀಸ್ (ಗ್ರಂಥಗಳು) ಮಹತ್ವ ಕುರಿತು ತಿಳಿಸಿದರು.
ಶಿಬಿರಾರ್ಥಿಗಳಾದ ಅಬೂಬಕರ್, ತಸ್ಲಿಮಾ, ಟಿ. ಸಫಾ, ಉಮ್ಮಿ ಐಮನ್, ಶಾಹೀದ, ಸಮೀರ, ಅನಿಸಿಕೆ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಆಫೀಜ್, ಅಲ್ತಾಫ್ ಅಲಿ, ಆಫೀಜ್ ಮಹೆಬೂಬ ನೀರಲೂಟಿ, ಆಫೀಜ್ ಕೆ. ಮಹೆಬೂಬ, ಆಫೀಜ್ ಉಮರ್ ಫಾರೂಕ್ ಪ್ರಮುಖರಾದ ಮೌಲಸಾಬ ಶಿರವಾರ, ಶೌಕತ ಅಲಿ ನಡಲಮನಿ ಇತರರು ಇದ್ದರು. ಫಾರೂಕ್ ನಿರೂಪಿಸಿದರು.
ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್ನು ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.