ADVERTISEMENT

ಸೆಸ್ಕ್‌ನಿಂದ ‘ಮಾದರಿ ಗ್ರಾಮ ಯೋಜನೆ’ಗೆ 6 ಗ್ರಾಮಗಳು ಆಯ್ಕೆ: ಬಂಡಿಸಿದ್ದೇಗೌಡ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 3:26 IST
Last Updated 7 ಡಿಸೆಂಬರ್ 2025, 3:26 IST
ಶ್ರೀರಂಗಪಟ್ಟಣ ತಾಲ್ಲೂಕಿನ ಪಿ. ಹೊಸಹಳ್ಳಿ ಗ್ರಾಮ ಸೆಸ್ಕ್‌ ವತಿಯಿಂದ ಮಾದರಿ ಗ್ರಾಮ ಯೋಜನೆಗೆ ಆಯ್ಕೆಯಾಗಿದ್ದು, ಶಾಸಕ ರಮೇಶ ಬಂಡಿಸಿದ್ದೇಗೌಡ ₹50 ಲಕ್ಷ ವೆಚ್ಚದ ಕಾಮಗಾರಿಗೆ ಶನಿವಾರ ಚಾಲನೆ ನೀಡಿದರು
ಶ್ರೀರಂಗಪಟ್ಟಣ ತಾಲ್ಲೂಕಿನ ಪಿ. ಹೊಸಹಳ್ಳಿ ಗ್ರಾಮ ಸೆಸ್ಕ್‌ ವತಿಯಿಂದ ಮಾದರಿ ಗ್ರಾಮ ಯೋಜನೆಗೆ ಆಯ್ಕೆಯಾಗಿದ್ದು, ಶಾಸಕ ರಮೇಶ ಬಂಡಿಸಿದ್ದೇಗೌಡ ₹50 ಲಕ್ಷ ವೆಚ್ಚದ ಕಾಮಗಾರಿಗೆ ಶನಿವಾರ ಚಾಲನೆ ನೀಡಿದರು   

ಶ್ರೀರಂಗಪಟ್ಟಣ: ‘ತಾಲ್ಲೂಕಿನ ಪಿ. ಹೊಸಹಳ್ಳಿ ಸೇರಿದಂತೆ 6 ಗ್ರಾಮಗಳನ್ನು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮವು ಪ್ರಸಕ್ತ ಸಾಲಿನ ಮಾದರಿ ಗ್ರಾಮ ಯೋಜನೆಗೆ ಆಯ್ಕೆ ಮಾಡಿದ್ದು, ಸದರಿ ಗ್ರಾಮಗಳಿಗೆ ವಿದ್ಯುತ್‌ ಕ್ಷೇತ್ರದಲ್ಲಿ ಸಮಗ್ರ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ತಾಲ್ಲೂಕಿನ ಪಿ. ಹೊಸಹಳ್ಳಿಯಲ್ಲಿ ಶನಿವಾರ ಸೆಸ್ಕ್‌ ಇಲಾಖೆಯ ಮಾದರಿ ಗ್ರಾಮ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ಹುಲಿಕೆರೆ, ಮಹದೇವಪುರ, ಕೊಡಿಯಾಲ, ಗಾಮನಹಳ್ಳಿ, ನೆಲಮನೆ ಹಾಗೂ ಬಾಬುರಾಯನಕೊಪ್ಪಲು– ಕಿರಂಗೂರು ಜೋಡಿ ಗ್ರಾಮಗಳನ್ನು ಮಾದರಿ ಗ್ರಾಮ ಯೋಜನೆಗೆ ಆಯ್ಕೆ ಮಾಡಲಾಗಿದೆ. ಪ್ರತಿ ಗ್ರಾಮಕ್ಕೆ ತಲಾ ₹50 ಲಕ್ಷ ಅನುದಾನ ನೀಡಲಾಗಿದೆ. ಆಯಾ ಗ್ರಾಮಗಳಲ್ಲಿ ಶಿಥಿಲಗೊಂಡ ವಿದ್ಯುತ್‌ ಕಂಬಗಳನ್ನು ಬದಲಾಯಿಸಲಾಗುತ್ತದೆ. ಅಗತ್ಯ ಇರುವ ಕಡೆ ಹೊಸ ಕಂಬಗಳನ್ನು ಹಾಕಲಾಗುವುದು. ವಿದ್ಯುತ್‌ ವೋಲ್ಟೇಜ್ ಗುಣಮಟ್ಟವನ್ನು ಹೆಚ್ಚಿಸಲು ವಿದ್ಯುತ್‌ ಪರಿವರ್ತಕಗಳನ್ನು ಉನ್ನತೀಕರಿಸಲಾಗುತ್ತದೆ. ವಿದ್ಯುತ್‌ ಸರಬರಾಜಿನಲ್ಲಿ ಉಂಟಾಗುವ ಅಡಚಣೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸಲಾಗುತ್ತದೆ’ ಎಂದು ಅವರು ವಿವರಿಸಿದರು.

‘ಮೊದಲನೇ ಹಂತದಲ್ಲಿ ನೇರಲಕೆರೆ, ಕೆ.ಶೆಟ್ಟಹಳ್ಳಿ, ಅರಕೆರೆ ಸೇರಿದಂತೆ 5 ಗ್ರಾಮಗಳಲ್ಲಿ ಸೆಸ್ಕ್‌ ಇಲಾಖೆಯ ಮಾದರಿ ಗ್ರಾಮ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಕೃಷಿ ಪಂಪ್‌ಸೆಟ್‌ಗಳಿಗೆ 3– ಫೇಸ್ ವಿದ್ಯುತ್‌ ಸರಬರಾಜು ಮಾಡುವ ಮೂಲಕ ರೈತರ ಜೀವನ ಸುಧಾರಣೆಗೆ ಕ್ರಮ ವಹಿಸಲಾಗುತ್ತಿದೆ. ಇದಕ್ಕಾಗಿ ₹55 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿದ್ದು, ತಲಾ ಎರಡು ಕೃಷಿ ಪಂಪ್‌ಸೆಟ್‌ಗಳಿಗೆ ಒಂದರಂತೆ 25 ಕೆವಿಎ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ಅವರು ಹೇಳಿದರು.

ADVERTISEMENT

ಗ್ರಾಮ ಪಂಚಾಯಿತಿ ಅಧ್ಯಕ್ಷ ಚಲುವರಾಜು, ಉಪಾಧ್ಯಕ್ಷೆ ಸುಮಿತ್ರಾ, ಅಭಿವೃದ್ಧಿ ಅಧಿಕಾರಿ ಶಶಿಕಲಾ, ಸದಸ್ಯರಾದ ಶ್ರೀಕಂಠ, ಕೃಷ್ಣಾನಂದ, ಮುರಳಿ, ಸಾಗರ್‌, ರಾಣಿ, ಉಮಾ, ಮುಖಂಡರಾದ ಪುಟ್ಟರಾಜು, ಕೃಷ್ಣಮೂರ್ತಿ, ಸತೀಶ್, ಸೆಸ್ಕ್‌ ಕಾರ್ಯಪಾಲಕ ಎಂಜಿನಿಯರ್‌ ವಿನುತಾ ವೈ.ಆರ್, ಎಇಇ ಎಂ. ಮಂಜುನಾಥ್ ಪ್ರಸಾದ್, ಸಹಾಯಕ ಎಂಜಿನಿಯರ್‌ ಸಿ. ನವೀನ್‌ಕುಮಾರ್ ಹಾಗೂ ಸೆಸ್ಕ್‌ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.