ಮಂಡ್ಯ: ಜಿಲ್ಲಾಧಿಕಾರಿ ಕುಮಾರ ಅವರಿಗೆ ಬುದ್ಧ ಭಾರತ ಫೌಂಡೇಶನ್ ವತಿಯಿಂದ ‘ಜನಸ್ನೇಹಿ ಆಡಳಿತಗಾರ’ ಬಿರುದು ನೀಡಿ ಸನ್ಮಾನಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ‘ಜಿಲ್ಲಾಧಿಕಾರಿ ಕುಮಾರ ಅವರು ಅತ್ಯುತ್ತಮ ಆಡಳಿತಗಾರರು. ಉತ್ತಮವಾದ ಗುಣ, ನಡತೆ ಹೊಂದಿ ಜನಸಾಮಾನ್ಯರ ಕಷ್ಟ ಸುಖ ಆಲಿಸಿ ಜನ ಮನ್ನಣೆ ಹೊಂದಿದ್ದಾರೆ. ಜನಸ್ನೇಹಿ ಆಡಳಿತ ನಡೆಸುತ್ತಿರುವ ಇವರಿಗೆ ಬಿರುದು ನೀಡಿರುವುದು ಶ್ಲಾಘನೀಯ’ ಎಂದು ಅಭಿಪ್ರಾಯಪಟ್ಟರು.
ಬುದ್ಧ ಭಾರತ ಫೌಂಡೇಶನ್ ಸಂಸ್ಥಾಪಕ ಜೆ.ರಾಮಯ್ಯ ಮಾತನಾಡಿ, ‘ಎರಡು ವರ್ಷಗಳಿಂದ ಜಿಲ್ಲಾಧಿಕಾರಿ ಕುಮಾರ ಅವರು ಮಾಡಿರುವ ಜನಪರ ಕೆಲಸಗಳು ಇತರೆ ಅಧಿಕಾರಿಗಳಿಗೆ ಪ್ರೇರಣೆ’ ಎಂದು ಬಣ್ಣಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮುಖಂಡರಾದ ಬಸವೇಗೌಡ, ಅಮ್ಜದ್‌ಪಾಷ, ವೇಣುಗೋಪಾಲ್, ಎಂ.ವಿ.ಕೃಷ್ಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.