
ನಾಗರಹೊಳೆ ಹುಲಿ ಸಂರಕ್ಷಣಾ ಪ್ರದೇಶ ಹುಣಸೂರು ವಲಯದಲ್ಲಿ ಶನಿವಾರ ಪತ್ತೆಯಾದ ಗಂಡು ಹುಲಿ ಕಳೇಬರ
ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಮುದ್ದನಹಳ್ಳಿ ಮೀಸಲು ಅರಣ್ಯದ ಆನೇಚೌಕೂರು ಶಾಖೆಯ ಶೆಟ್ಟಹಳ್ಳಿ –ಲಕ್ಕಪಟ್ಟಣ ಗಸ್ತಿನಲ್ಲಿ ಸುಮಾರು 6 ವರ್ಷದ ಗಂಡು ಹುಲಿ ಕಳೇಬರ ಪತ್ತೆಯಾಗಿದೆ
ಅರಣ್ಯದೊಳಗಿನ ಹಾರಂಗಿ ನಾಲಾ ಸೇತುವೆ ಕೆಳಭಾಗದಲ್ಲಿ ಹುಲಿ ಕಳೇಬರ ಪತ್ತೆಯಾಗಿದ್ದು, ಅದರ ಮೈಮೇಲೆ ಯಾವುದೇ ಗಾಯದ ಗುರುತು ಕಂಡುಬಂದಿಲ್ಲ. ಹುಲಿ ಸಾವಿನ ಬಗ್ಗೆ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರದಲ್ಲಿ ತಿಳಿಯಲಿದೆ’ ಎಂದು ಉಪ ಅರಣ್ಯ ಸಂರಕ್ಷಾಧಿಕಾರಿ ಸೀಮಾ ತಿಳಿಸಿದ್ದಾರೆ.
‘ಹನಗೋಡು ಹಾಗೂ ಗುರುಪುರ ಅರಣ್ಯದಂಚಿನಲ್ಲಿ ಕಳೆದ ಹಲವು ದಿನಗಳಿಂದ ಜಾನುವಾರು ಬೇಟೆಯಾಡಿ ಆತಂಕ ಸೃಷ್ಟಿಸಿದ್ದ ಈ ಹುಲಿ ನೇರಳಕುಪ್ಪೆ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ ಹಸು ಕೊಂದುಹಾಕಿತ್ತು. ಹುಲಿ ಸೆರೆಗೆ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ನಡೆಸಿತ್ತು’ ಎಂದು ಎ.ಸಿ.ಎಫ್ ಲಕ್ಷ್ಮೀಕಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.