ADVERTISEMENT

ತಿ.ನರಸೀಪುರ | ಫಿಸಿಯೋಥೆರಪಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 16:24 IST
Last Updated 22 ಜೂನ್ 2025, 16:24 IST

ತಿ.ನರಸೀಪುರ: 2025-26ನೇ ಸಾಲಿನಲ್ಲಿ ತಿ.ನರಸೀಪುರ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಸಮನ್ವಯ ಸಂಪನ್ಮೂಲ ಕೇಂದ್ರದಲ್ಲಿ ಗೌರವ ಸಂಭಾವನೆಗೆ ಕರ್ತವ್ಯ ನಿರ್ವಹಿಸಲು ಫಿಜಿಯೋಥೆರಪಿಸ್ಟ್ ಹಾಗೂ ಆಯಾ ಕೆಲಸಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಫಿಜಿಯೋಥೆರಪಿಸ್ಟ್ ಹುದ್ದೆಗೆ ಬಿಪಿಟಿ ಅಥವಾ ಡಿಪಿಟಿ ಹೊಂದಿರಬೇಕು. ಆಯಾ ಹುದ್ದೆಗೆ ಕನಿಷ್ಠ ಎಸ್ಎಸ್ಎಲ್‌ಸಿ ಆಗಿರಬೇಕು. ಮಾಸಿಕ ಗೌರವ ಸಂಭಾವನೆ ಫಿಜಿಯೋಥೆರಪಿಸ್ಟ್‌ಗೆ ₹12 ಸಾವಿರ, ಆಯಾ ಹುದ್ದೆಗೆ ₹6 ಸಾವಿರ ನಿಗದಿಪಡಿಸಲಾಗಿದೆ. ಈ ಹುದ್ದೆಗಳು ತಾತ್ಕಾಲಿಕವಾಗಿದ್ದು, 2026 ಮಾರ್ಚ್‌ವರೆಗೆ ನಿಗದಿಪಡಿಸಲಾಗಿದೆ.

ಆಸಕ್ತರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪದನಿಮಿತ್ತ ತಾಲ್ಲೂಕು ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಇಲಾಖೆ, ತಿ.ನರಸೀಪುರ, ಮೈಸೂರು ಜಿಲ್ಲೆ ಇವರಿಗೆ ಜೂನ್ 26ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.