ADVERTISEMENT

ದೀಪಾವಳಿ | ಮೈಸೂರು–ಜೈಪುರ ನಡುವೆ 2 ಟ್ರಿಪ್‌ ವಿಶೇಷ ರೈಲು ಸಂಚಾರ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 21:22 IST
Last Updated 16 ಅಕ್ಟೋಬರ್ 2025, 21:22 IST
<div class="paragraphs"><p>ರೈಲು</p></div>

ರೈಲು

   

– ಪ್ರಜಾವಾಣಿ ಚಿತ್ರ

ಮೈಸೂರು: ದೀಪಾವಳಿ ಹಬ್ಬದ ಪ್ರಯುಕ್ತ ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ನಿಭಾಯಿಸಲು, ರೈಲ್ವೆ ಮಂಡಳಿಯು ಮೈಸೂರು- ಜೈಪುರ ನಡುವೆ ತಲಾ ಎರಡು ಟ್ರಿಪ್‌ ವಿಶೇಷ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆಗೆ ಅನುಮೋದನೆ ನೀಡಿದೆ.

ADVERTISEMENT

ರೈಲು ಸಂಖ್ಯೆ 06231 ಮೈಸೂರು–ಜೈಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಅ. 18 ಮತ್ತು  5ರಂದು ಮೈಸೂರಿನಿಂದ ರಾತ್ರಿ 11.55ಕ್ಕೆ ಹೊರಡಲಿದೆ ಸೋಮವಾರ ಸಂಜೆ 6.40ಕ್ಕೆ ಜೈಪುರವನ್ನು ತಲುಪಲಿದೆ. 

ಅಲ್ಲಿಂದ ರೈಲು ಸಂಖ್ಯೆ 06232 ಜೈಪುರ–ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಅ. 21 ಮತ್ತು 28ರಂದು ಜೈಪುರದಿಂದ ಮುಂಜಾನೆ 4ಕ್ಕೆ ಹೊರಟು, ಗುರುವಾರ ಮುಂಜಾನೆ 3.30ಕ್ಕೆ ಮೈಸೂರಿಗೆ ಆಗಮಿಸಲಿದೆ.

ಈ ವಿಶೇಷ ರೈಲು ಮಾರ್ಗ ಮಧ್ಯೆ ಮಂಡ್ಯ, ಕೆಎಸ್‌ಆರ್ ಬೆಂಗಳೂರು, ತುಮಕೂರು, ಅರಸೀಕೆರೆ, ಕಡೂರು, ದಾವಣಗೆರೆ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಸತಾರಾ, ಪುಣೆ, ಕಲ್ಯಾಣ್, ವಸಾಯಿ ರೋಡ್, ಪಾಲ್ಘರ್, ವಾಪಿ, ವಲ್ಸಾದ, ಸೂರತ್, ವಡೋದರಾ, ಅಹಮದಾಬಾದ್, ಸಾಬರಮತಿ ಬಿಜಿ, ಮಹೆಸನಾ, ಪಾಲನ್‌ಪುರ, ಅಬು ರೋಡ್, ಫಲ್ನಾ, ರಾಣಿ, ಮಾರ್ವಾರ್, ಸೋಜತ್ ರೋಡ್, ಬೇವರ್, ಅಜ್ಮೀರ್, ಮತ್ತು ಕಿಶನ್‌ಗಢ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. 

ಜೈಪುರದ ಕಡೆಗೆ ಹೋಗುವಾಗ ರೈಲು ಸಂಖ್ಯೆ 06231 ಸಾಬರಮತಿ ಬಿಜಿ ನಿಲುಗಡೆ ಇರುವುದಿಲ್ಲ ಹಾಗೂ ಮೈಸೂರಿನ ಕಡೆಗೆ ಹಿಂದಿರುಗುವ ಪ್ರಯಾಣದಲ್ಲಿ ರೈಲು ಸಂಖ್ಯೆ 06232 ಅಹಮದಾಬಾದ್ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.

ಈ ವಿಶೇಷ ರೈಲು ಒಟ್ಟು 18 ಬೋಗಿ ಒಳಗೊಂಡಿದೆ. ಅವುಗಳಲ್ಲಿ 2 ಎಸಿ ಟು-ಟೈರ್, 12 ಎಸಿ ತ್ರಿ-ಟೈರ್, 2 ಸ್ಲೀಪರ್ ಕ್ಲಾಸ್ ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳು ಇರಲಿವೆ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.