ADVERTISEMENT

ಮಾನಸಗಂಗೋತ್ರಿ, ವಿಜಯ ಕಾಲೇಜು ಚಾಂಪಿಯನ್ಸ್‌

ಮೈಸೂರು ವಿ.ವಿ. ಅಥ್ಲೆಟಿಕ್ಸ್‌; ಪ್ರಜ್ವಲ್‌, ಹರ್ಷಿತಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 2:28 IST
Last Updated 14 ನವೆಂಬರ್ 2025, 2:28 IST
ಸಮಗ್ರ ಪ್ರಶಸ್ತಿಯೊಂದಿಗೆ ಮಾನಸಗಂಗೋತ್ರಿ ಕ್ರೀಡಾ ಮಂಡಳಿ ತಂಡ
ಸಮಗ್ರ ಪ್ರಶಸ್ತಿಯೊಂದಿಗೆ ಮಾನಸಗಂಗೋತ್ರಿ ಕ್ರೀಡಾ ಮಂಡಳಿ ತಂಡ   

ಮೈಸೂರು: ಮಾನಸಗಂಗೋತ್ರಿಯ ಕ್ರೀಡಾ ಮಂಡಳಿ ಹಾಗೂ ತಿ.ನರಸೀಪುರದ ಪಿಆರ್‌ಎಂ ವಿಜಯ ಪ್ರಥಮ ದರ್ಜೆ ಕಾಲೇಜು ತಂಡಗಳು ಗುರುವಾರ ಇಲ್ಲಿ ಮುಕ್ತಾಯಗೊಂಡ ಮೈಸೂರು ವಿ.ವಿ ಮಟ್ಟದ ಅಂತರ ಕಾಲೇಜು ಅಥ್ಲೆಟಿಕ್ಸ್‌ನಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದ ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡವು.

ಪುರುಷರ ವಿಭಾಗದಲ್ಲಿ ಮಾನಸಗಂಗೋತ್ರಿ ತಂಡವು ಒಟ್ಟು 125 ಅಂಕಗಳೊಂದಿಗೆ ಅಗ್ರ ಪ್ರಶಸ್ತಿ ಎತ್ತಿಹಿಡಿಯಿತು. 74 ಅಂಕಗಳೊಂದಿಗೆ ಯುವರಾಜ ಕಾಲೇಜು ರನ್ನರ್ ಅಪ್ ಆಗಿದ್ದು, 41 ಅಂಕಗಳೊಂದಿಗೆ ಎಸ್‌ಬಿಆರ್‌ಆರ್ ಮಹಾಜನ ಪದವಿ ಕಾಲೇಜು ಎರಡನೇ ರನ್ನರ್ ಅಪ್ ಸ್ಥಾನ ಪಡೆಯಿತು. 100 ಮೀ. ಓಟವನ್ನು 10.80 ಸೆಕೆಂಡುಗಳಲ್ಲಿ ಕ್ರಮಿಸಿ 946 ಅಂಕ ಸಂಪಾದಿಸಿದ ಟಿಟಿಎಲ್ ಬಿಬಿಎಂ ಕಾಲೇಜಿನ ಆರ್.ಪ್ರಜ್ವಲ್‌ ಅತ್ಯುತಮ್ಮ ಕ್ರೀಡಾಪಟು ಗೌರವಕ್ಕೆ ಪಾತ್ರವಾದರು.

ಮಹಿಳೆಯರ ವಿಭಾಗದಲ್ಲಿ ಪಿಆರ್‌ಎಂ ವಿಜಯ ಪ್ರಥಮ ದರ್ಜೆ ಕಾಲೇಜು ತಂಡವು ಒಟ್ಟಾರೆ 83 ಅಂಕಗಳೊಂದಿಗೆ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು. ಟೆರೇಷಿಯನ್ ಕಾಲೇಜು 70 ಅಂಕಗಳೊಂದಿಗೆ ಮೊದಲ ರನ್ನರ್ ಅಪ್ ಹಾಗೂ ಮಾನಸಗಂಗೋತ್ರಿ ಕ್ರೀಡಾ ವಿಭಾಗವು ಎರಡನೇ ರನ್ನರ್ ಅಪ್‌ ಆಗಿ ಹೊರಹೊಮ್ಮಿದವು.

ADVERTISEMENT

ಜೆಎಸ್‌ಎಸ್ ಮಹಿಳಾ ಕಾಲೇಜಿನ ಹರ್ಷಿತಾ 100 ಮೀಟರ್ ಓಟವನ್ನು 12.34 ಸೆಕೆಂಡುಗಳಲ್ಲಿ ತಲುಪಿ 925 ಅಂಕಗಳೊಂದಿಗೆ ವೈಯಕ್ತಿಕ ಚಾಂಪಿಯನ್‌ ಆದರು.

ಕೊನೆಯ ದಿನದ ಫಲಿತಾಂಶ

ಪುರುಷರು: ಹೈಜಂಪ್: ಕಾರ್ತಿಕ್ ಜಿ. (ಪಿಜಿಎಸ್‌ಸಿ, ಮಾನಸಗಂಗೋತ್ರಿ. ಎತ್ತರ: 1.56 ಮೀ)–1, ರಕ್ಷಿತ್ ಎಚ್.ಎಸ್. ( ಬಿಜಿಎಸ್ ಪದವಿ ಕಾಲೇಜು)–2, ಹಿತೇಶ ಡಿ. (ದೇವರಾಜ ಅರಸು ಪದವಿ ಕಾಲೇಜು, ಹುಣಸೂರು)–3; ಹ್ಯಾಮರ್ ಥ್ರೋ: ಕುಶಾಲ್ ಗೌಡ ಕೆ.ಜೆ. (ಮಾನಸಗಂಗೋತ್ರಿ. ದೂರ: 23.41 ಮೀ)–1, ರಕ್ಷಿತ್ ಬಾಬು ಎಚ್.ಸಿ. (ಮಾನಸಗಂಗೋತ್ರಿ)–2, ರವಿಪ್ರಸಾದ್ ಮೌರ್ಯ ( ಮಹಾರಾಜ ಕಾಲೇಜು)–3.

ಶಾಟ್‌ಪಟ್: ಮೋಹನ್ ಇ. (ಡಿ.ಬನುಮಯ್ಯ ಕಾಲೇಜು. ದೂರ: 13.28 ಮೀ)–1, ರವಿಪ್ರಸಾದ್ ಮೌರ್ಯ ( ಮಹಾರಾಜ ಕಾಲೇಜು)–2, ಚಂದ್ರು (ಮಾನಸಗಂಗೋತ್ರಿ)–3. ಡೆಕಥ್ಲಾನ್: ಕುಶಾಲ್ ಗೌಡ ಕೆ.ಜೆ. (ಮಾನಸಗಂಗೋತ್ರಿ. 3368 ಅಂಕ)–1, ಪ್ರಜ್ವಲ್ ಎಂ.ಪಿ. (ಮಾನಸಗಂಗೋತ್ರಿ)–2, ಕಾರ್ತಿಕ್ ಎಚ್.ಬಿ. ( ಯುವರಾಜ ಕಾಲೇಜು)–3.

4X100 ಮೀ. ರಿಲೇ: ಮನೋಜ್ ಎಚ್.ಆರ್. ಮೊಹಮ್ಮದ್ ಶಮಿಲ್ ಎ., ಗಣೇಶ್ ಕುಮಾರ್, ಅಕ್ಷಯ್ ವಿ. ( ಮಹಾರಾಜ ಕಾಲೇಜು, ಸಮಯ: 46:73 ಸೆಕೆಂಡ್‌)–1, ಮೋಹಿತ್ ಬಾಫುಲ್ ಆರ್., ಪ್ರಜ್ವಲ್, ಕುಶಾಲ್, ಪೃಥ್ವಿ, (ಯುವರಾಜ ಕಾಲೇಜು)–2, ಪ್ರಜ್ವಲ್, ಹರ್ಷ, ತೇಜುನಾಯಕ್ ಬಿ.ಕೆ., ಅಯನ್ ಎನ್. (ಮಾನಸಗಂಗೋತ್ರಿ)–3.

ಮಹಿಳಾ ವಿಭಾಗ: 10 ಕಿ.ಮೀ. ಓಟ: ಅಶ್ವಿನಿ ( ಟೆರೇಷಿಯನ್ ಕಾಲೇಜು. ಕಾಲ: 43ನಿಮಿಷ, 59.36 ಸೆಕೆಂಡ್)–1, ಪೂಜಾ ಕೆ.ಪಿ. ( ಪಿಆರ್‌ಎಂ ವಿಜಯ ಕಾಲೇಜು)–2, ಪ್ರಕೃತಿ ಕೆ.ಎಂ. ( ವಿಜಯ ಕಾಲೇಜು)–3; ಡಿಸ್ಕಸ್ ಥ್ರೋ: ವರ್ಷಿತಾ ಯು.ಎನ್. (ಮಾನಸಗಂಗೋತ್ರಿ. ದೂರ: 23.12 ಮೀಟರ್)–1, ಡಿಂಪಲ್ ಗೌಡ ( ಟೆರೇಷಿಯನ್ ಕಾಲೇಜು)–2, ಮೇಘನಾ ಬಿ.ಎಂ. (ಮಾನಸಗಂಗೋತ್ರಿ)–3.

ಹೆಪ್ಟಾಥ್ಲಾನ್: ಮಹೇಶ್ವರಿ ಆರ್. ( ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು. 1191 ಅಂಕ)–1, ಸಿಂಚನಾ ಎಂ.ಎಸ್. (ಮಹಾರಾಣಿ ವಿಜ್ಞಾನ ಕಾಲೇಜು)–2, ಸೌಜನ್ಯ ಎಚ್.ವೈ. (ಮಹಿಳಾ ಪ್ರಥಮದರ್ಜೆ ಕಾಲೇಜು, ಕೆ.ಆರ್. ನಗರ)–3; ಜಾವೆಲಿನ್ ಥ್ರೋ: ವರ್ಷಿತಾ ಯು.ಎನ್. (ಮಾನಸಗಂಗೋತ್ರಿ. ದೂರ: 20.07 ಮೀ)–1, ಸಾನಿಕಾ ಕೆ.ಎಸ್. ( ಕ್ರೈಸ್ಟ್ ಕಾಲೇಜು)–2, ಪ್ರಾರ್ಥನಾ ಆರ್. ಗೌಡ (ಜೆಎಸ್‌ಎಸ್ ಮಹಿಳಾ ಕಾಲೇಜು)–3; ಲಾಂಗ್ ಜಂಪ್: ದಿಶಾ ಗಣಪತಿ ( ವಿದ್ಯಾಶ್ರಮ ಕಾಲೇಜು. ಉದ್ದ: 5.28 ಮೀ)–1, ಲಿನ್ಯಾ ಮೇರಿ ಕೆ. (ಪ್ರಥಮ ದರ್ಜೆ ಕಾಲೇಜು, ಸಿದ್ಧಾರ್ಥನಗರ)–2, ರಂಜಿತಾ ಎನ್. (ಟಿಟಿಎಲ್ ಕಾಲೇಜು)–3.

4X100 ಮೀ. ರಿಲೇ: ಪೂಜಾ ಕೆ.ಪಿ., ಸಹನಾ ಎಂ, ಕೀರ್ತನಾ ಎಸ್, ವರ್ಷಿತಾ (ಪಿಆರ್‌ಎಂ ವಿಜಯ ಕಾಲೇಜು. ಕಾಲ: 58.68 ಸೆ.)–1, ಹರ್ಷಿತಾ, ಸುಪ್ರಿತಾ, ಅರ್ಪಿತಾ, ದೀಕ್ಷಿತಾ, (ಟೆರೇಷಿಯನ್ ಕಾಲೇಜು)–2, ಲಕ್ಷ್ಮಿ ಕೆ, ಬಿಂದು, ಜಯಶೀಲ ಎಂ, ಸಂಜನಾ ಬಿ.ಜೆ. ( ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು)–3.

- ಪುರುಷರ 400 ಮೀ ಓಟ ಭರತ್ ಗಿರಿ ಗೌಡ (ಮಹಾಜನ ಕಾಲೇಜು. ಕಾಲ: 51.96 ಸೆಕೆಂಡ್‌)–1 ಶಶಾಂಕ್ ಗೌಡ (ಸೇಪಿಯಂಟ್ ಕಾಲೇಜು)–2 ಪ್ರಶಾಂತ್ ಕೆ. ( ಯುವರಾಜ ಕಾಲೇಜು)–3. ಲಾಂಗ್ ಜಂಪ್: 1. ಪೃಥ್ವಿ ಎಂ. (ಯುವರಾಜ ಕಾಲೇಜು. ಉದ್ದ: 6.64 ಮೀ) ಕುಶಾಲ್ ಕೆ. (ಯುವರಾಜ ಕಾಲೇಜು)–2 ರವಿ. ಎನ್. ( ಪ್ರಥಮ ದರ್ಜೆ ಕಾಲೇಜು ಸಿದ್ಧಾರ್ಥನಗರ)–3. 5000 ಮೀ. ಓಟ: ಎ.ಆರ್. ರೋಹಿತ್ (ಜಿಎಫ್‌ಜಿಸಿ ಹುಲ್ಲಹಳ್ಳಿ. ಸಮಯ: 15 ನಿಮಿಷ 43.21 ಸೆಕೆಂಡ್)–1 ದೊರೆಸ್ವಾಮಿ ಎನ್. ( ಪಿಆರ್‌ಎಂ ವಿಜಯ ಕಾಲೇಜು ತಿ. ನರಸೀಪುರ)–2 ಮನೀಶ್ ಎಸ್. (ಮಾನಸಗಂಗೋತ್ರಿ)–3. ಹಾಫ್ ಮ್ಯಾರಥಾನ್: ಪುರುಷೋತ್ತಮ ಆರ್. (ಮಾನಸಗಂಗೋತ್ರಿ. ಕಾಲ: 1 ಗಂಟೆ –19.34 ಸೆಕೆಂಡ್‌)–1 2. ಪ್ರಸನ್ನ ಕುಮಾರ್ ( ದೇವರಾಜ ಅರಸು ಪದವಿ ಕಾಲೇಜು ಹುಣಸೂರು)–2 ದೀಕ್ಷಿತ್ ವೈ.ಎಸ್. ( ಶಾರದಾ ವಿಲಾಸ ಕಾಲೇಜು)–3. ಮಹಿಳಾ ವಿಭಾಗ: 400 ಮೀ. ಓಟ: ಲಕ್ಷ್ಮಿ ಕೆ.ಎಸ್. ( ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು. ಕಾಲ: 1ನಿಮಿಷ 03.78 ಸೆಕೆಂಡ್)–1 ಕೀರ್ತನಾ ಎಸ್. (ಪಿಆರ್‌ಎಂ ವಿಜಯ ಕಾಲೇಜು)–2 ಪ್ರಕೃತಿ ಕೆ.ಎಂ. (ವಿಜಯ ಕಾಲೇಜು)–3; 1500 ಮೀ. ಓಟ: ಸಹನಾ ಎಂ. ( ಪಿಆರ್‌ಎಂ ವಿಜಯ ಕಾಲೇಜು)–1 2. ಜ್ಯೋತಿ (ವಿಜಯ ಕಾಲೇಜು)–2 ಅನುಶ್ರೀ ಎಂ.ಎಲ್. ( ಟೆರೇಷಿಯನ್ ಕಾಲೇಜು)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.