
ತಿ.ನರಸೀಪುರ: ಕುಡಿಯುವ ನೀರಿನ ನಲ್ಲಿ ಸಂಪರ್ಕ ಯೋಜನೆ ಜಲ ಜೀವನ್ ಮಿಷನ್ ಕಾಮಗಾರಿ ಪೂರ್ಣಗೊಳ್ಳುವ ವರೆಗೂ ಅಧಿಕಾರಿಗಳು ಅದನ್ನು ಹಸ್ತಾಂತರ ಮಾಡದಂತೆ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಬಟ್ಟಾಳಿಗೆಹುಂಡಿ ಗ್ರಾಮದಲ್ಲಿ ಬುಧವಾರ ಚಾವಡಿಕಟ್ಟೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಕೊಳಾಯಿ ಅಳವಡಿಸುವ ಜಲ ಜೀವನ್ ಮಿಷನ್ ಕಾಮಗಾರಿ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಗುತ್ತಿಗೆದಾರರು ಕಾಮಗಾರಿ ಅಪೂರ್ಣಹಂತದಲ್ಲೇ ಹಸ್ತಾಂತರಿಸುವ ಆರೋಪವಿದೆ. ಕಾಮಗಾರಿ ಪೂರ್ಣಗೊಳ್ಳದೇ ಗ್ರಾಮ ಪಂಚಾಯಿತಿ ಅಥವಾ ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ವಶಕ್ಕೆ ಪಡೆಯಬಾರದು. ವಶಕ್ಕೆ ಪಡೆದ ಮೇಲೆ ದೂರುಗಳು ಬಂದರೆ ಕ್ರಮ ಅನಿವಾರ್ಯ ವಾಗುತ್ತದೆ ಎಂದು ಎಚ್ಚರಿಸಿದರು.
ಸಾರ್ವಜನಿಕರಿಂದ ಅಹವಾಲು ಸ್ವೀಕರಸಿದ ಅವರು, ವರುಣ ಕ್ಷೇತ್ರದ ಪ್ರತಿ ಗ್ರಾಮಲ್ಲೂ ಸಮಸ್ಯೆ ಆಲಿಸಿ, ಪರಿಹರಿಸಲು ಕ್ರಮ ವಹಿಸುತ್ತಿದ್ದೇನೆ. ಸರ್ಕಾರದ ಅನುದಾನದಲ್ಲಿ ಚಾವಡಿ ಕಟ್ಟೆ ನಿರ್ಮಿಸಲು ₹5 ಲಕ್ಷ ಮಂಜೂರು ಮಾಡಲಾಗಿದೆ ಎಂದರು.
ತುಂಬಲ ಗ್ರಾಮ ಸರ್ಕಾರಿ ಸಾರಿಗೆ ಬಸ್ ಸಂಚಾರವನ್ನು ಅಗಸ್ತಾಪುರ ಮಾರ್ಗವಾಗಿ ಬೊಮ್ಮನಾಯಕನಹಳ್ಳಿ ಗ್ರಾಮದವರೆಗೂ ವಿಸ್ತರಿಸುವಂತೆ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ತುಂಬಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತತ್ತಿ ಗ್ರಾಮದಿಂದ ಸಭೆ ಆರಂಭಿಸಿದ ಡಾ.ಯತೀಂದ್ರ ಸಿದ್ದರಾಮಯ್ಯ ತುಂಬಲ, ಅಗಸ್ತಾಪುರ, ಬಟ್ಟಾಳಿಗೆಹುಂಡಿ ಹಾಗೂ ಬೊಮ್ಮನಾಯಕನಹಳ್ಳಿ ಗ್ರಾಮಗಳಲ್ಲಿ ಸಭೆ ನಡೆಸಿದರು. ಬೊಮ್ಮನಾಯಕನಹಳ್ಳಿ ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರು ಒತ್ತಾಯಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಪಿ.ಎಸ್.ಅನಂತರಾಜು, ಪಿಡಿಒ ಧನಂಜಯ, ಜಿಲ್ಲಾಪಂಚಾಯಿತಿ ಎ ಇ ಇ ಪಿ.ಎನ್.ಚರಿತ, ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ, ಆರ್‌ಐ ಮಹೇಂದ್ರ, ಮುಖಂಡರಾದ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ಮಹದೇವಣ್ಣ, ತುಂಬಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮನಂಜಯ್ಯ, ಕೆ.ಮಹದೇವ, ತುಂಬಲ ಅಂದಾನಿ, ಮನ್ನೇಹುಂಡಿ ಮಹೇಶ್, ಪ್ರಶಾಂತ್ ಬಾಬು, ಎನ್.ಅನಿಲ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮುದ್ದೇಗೌಡ, ಕುಪ್ಯ ಪ್ರಭಾಕರ್, ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ನಿರ್ದೇಶಕಿ ಕುಪ್ಯ ಭಾಗ್ಯಮ್ಮ, ತುಂಬಲ ಮಂಜುನಾಥ್, ವಕೀಲ ಎಂ. ಶಿವಪ್ರಸಾದ್, ಗ್ರಾಮ ಪಂಚಾಯಿತಿ ಸದಸ್ಯ ಮಲ್ಲೇಶ, ನಿರ್ಮಲ, ಮೋಸಿನ್ ಖಾನ್, ಹದಿನಾರು ಅಭಿ, ಬಟ್ಟಾಳಿಗೆಹುಂಡಿ ಶಿವಣ್ಣ, ತುಂಬಲ ಅಭಿ, ಲಿಂಗಮೂರ್ತಿ, ಮಸ್ರೂರ್ ಅಹಮದ್, ಬೀರೇಗೌಡ, ಮಂಜುನಾಥ್, ಗವಿಸಿದ್ದಯ್ಯ, ಫೈನಾನ್ಸ್ ಕಾಂತರಾಜು, ಜಯಲಕ್ಷ್ಮಿ, ಮಹದೇವಮ್ಮ, ಚಂದ್ರಮ್ಮ, ಗುರುರಾಜ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.