
ನಂಜನಗೂಡು: ತಾಲ್ಲೂಕಿನ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಕುಪ್ಪರವಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ನಡೆಯಿತು.
ಬಿಳಿಗೆರೆ ಹೋಬಳಿಯ ಏಳು ಪ್ರೌಢಶಾಲೆಗಳ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು 18 ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಆತಿಥೇಯ ಕುಪ್ಪರವಳ್ಳಿ ಶಾಲೆಯ ಮಕ್ಕಳು ಜಾನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದರು. ಜಾನಪದ ನೃತ್ಯದಲ್ಲಿ ನಮಿತಾ, ಸಂಗೀತಾ, ಪುಷ್ಪಾ, ಶೈಲಜಾ, ಭಾವನಾ ಮತ್ತು ಶ್ರೇಯಾ ಭಾಗವಹಿಸಿದ್ದರು.
ಕವನ ವಾಚನದಲ್ಲಿ ಪುಷ್ಪಾ, ಕನ್ನಡ ಭಾಷಣದಲ್ಲಿ ಭಾಗ್ಯಲಕ್ಷ್ಮಿ, ಇಂಗ್ಲಿಷ್ ಭಾಷಣದಲ್ಲಿ ನಿಸರ್ಗಾ, ಜಾನಪದ ಗೀತೆಯಲ್ಲಿ ಕೀರ್ತನಾ ಪ್ರಥಮ ಬಹುಮಾನ ಪಡೆದರು. ಕವ್ವಾಲಿಯಲ್ಲಿ ಭರತ್, ಸಿದ್ದೇಶ, ಶ್ರಾವಂತ್ ಮತ್ತು ಪ್ರತಾಪ್ ಮೊದಲ ಬಹುಮಾನಕ್ಕೆ ಪಾತ್ರರಾದರು. ಸಮರ್ಥ್ ಎಚ್.ಎನ್. ಮಿಮಿಕ್ರಿ, ನಿವೇದಿತಾ ಚರ್ಚಾ ಸ್ಪರ್ಧೆಯಲ್ಲಿ, ತೇಜಸ್ ಕುಮಾರ್ ಮತ್ತು ದೀಪಿಕಾ ರಸಪ್ರಶ್ನೆ, ಹಿಂದಿ ಭಾಷಣದಲ್ಲಿ ದೀಪಿಕಾ ಮತ್ತು ಅಮೃತ ಚಿತ್ರಕಲೆಯಲ್ಲಿ, ಸಂಧ್ಯಾ ಭರತನಾಟ್ಯದಲ್ಲಿ ದ್ವಿತೀಯ ಬಹುಮಾನ ಪಡೆದರು.
ಕ್ಷೇತ್ರ ಸಮನ್ವಾಯಾಧಿಕಾರಿ ಬಸವರಾಜು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು, ಪಿಡಿಒ ಶೋಭಾ ದಿನೇಶ್ ಬಹುಮಾನದ ಕೊಡುಗೆ ನೀಡಿದ್ದರು. ಬಿಳಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಂಜುಂಡಸ್ವಾಮಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಸ್ವಾಮಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹದೇವ, ಪಿಡಿಒ ಗಣೇಶ್, ಪುಟ್ಟರಾಜು, ಶಾಲೆಯ ಮುಖ್ಯಶಿಕ್ಷಕ ಕೆ.ಕೆ.ಪ್ರಕಾಶ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೀಪು ಉಪಸ್ಥಿತರಿದ್ದರು. ಶಿಕ್ಷಕ ಜಯಣ್ಣ, ಪುಟ್ಟಸ್ವಾಮಿ ಬಿ.ಎಸ್. ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.