ADVERTISEMENT

ಸಾಂಪ್ರದಾಯಿಕ ಕೃಷಿ ಪದ್ಧತಿ ಬಿಡಬೇಡಿ: ಎಂ ಹನುಮಂತಪ್ಪ

ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಸಮಾರೋಪ ಸಮಾರಂಭ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 14:04 IST
Last Updated 13 ಜೂನ್ 2025, 14:04 IST
ರಾಯಚೂರಿನ ಡಿ.ರಾಂಪುರ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಆಯೋಜಿಸಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಸಮಾರೋಪ ಸಮಾರಂಭ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ. ಹನುಮಂತಪ್ಪ ಮಾತನಾಡಿದರು. ಶ್ರೀವಾಣಿ ಜಿ.ಎನ್, ದೀಪಾ ಕುಲಕರ್ಣಿ, ಕಲಾವತಿ, ಎ.ಆರ್. ಕುರುಬರ, ಬಸವಣ್ಣೆಪ್ಪ ಉಪಸ್ಥಿತರಿದ್ದರು
ರಾಯಚೂರಿನ ಡಿ.ರಾಂಪುರ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಆಯೋಜಿಸಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಸಮಾರೋಪ ಸಮಾರಂಭ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ. ಹನುಮಂತಪ್ಪ ಮಾತನಾಡಿದರು. ಶ್ರೀವಾಣಿ ಜಿ.ಎನ್, ದೀಪಾ ಕುಲಕರ್ಣಿ, ಕಲಾವತಿ, ಎ.ಆರ್. ಕುರುಬರ, ಬಸವಣ್ಣೆಪ್ಪ ಉಪಸ್ಥಿತರಿದ್ದರು   

ರಾಯಚೂರು: ‘ಸಾವಯವ ಕೃಷಿಯ ಕಡೆಗೆ ರೈತರು ಒಲವು ತೋರಿಸಬೇಕು. ಅಧಿಕ ಇಳುವರಿ ಆಸೆಗೆ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಬಿಡಬಾರದು. ಹೆಚ್ಚು ರಾಸಾಯನಿಕ ಬಳಸಿ ಭೂಮಿಯ ಫಲವತ್ತತೆ ಹಾಳು ಮಾಡಬಾರದು‘ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ ಹನುಮಂತಪ್ಪ ಹೇಳಿದರು.

ತಾಲ್ಲೂಕಿನ ಡಿ. ರಾಂಪುರ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ನೇತೃತ್ವದಲ್ಲಿ ಗುರುವಾರ ಆಯೋಜಿಸಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರೈತರು ತಮ್ಮ ಜಮೀನಿನಲ್ಲಿ ಸ್ವಲ್ಪ ಪ್ರಮಾಣದಲ್ಲಾದರೂ ಸಾವಯವ ಕೃಷಿ ಮಾಡಬೇಕು. ಹಂತ ಹಂತವಾಗಿ ಪರಿಸರ ಸ್ನೇಹಿ ಸಾವಯವ ಕೃಷಿಯನ್ನು ಅನುಸರಿಸಬೇಕು. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಕಲ್ಯಾಣ ಕರ್ನಾಟಕದ ರೈತರ ಆಶಾಕಿರಣಾವಾಗಿದ್ದು. ರೈತರ ಎಲ್ಲ ರೀತಿಯ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಈಗಾಗಲೇ ಹಲವು ತಳಿಗಳನ್ನು ಅಭಿವೃದ್ಧಿ ಪಡಿಸಿದೆ. ರೈತರು ಪೂರ್ಣ ಲಾಭ ಪಡೆಯಬೇಕು’ ಎಂದು ಹೇಳಿದರು.

ADVERTISEMENT

ಕೆವಿಕೆ ಮುಖ್ಯಸ್ಥ, ಹಿರಿಯ ವಿಜ್ಞಾನಿ ತಿಮ್ಮಣ್ಣ ಮಾತನಾಡಿ, ‘ಜಿಲ್ಲೆಯ ಸುಮಾರು 90 ಗ್ರಾಮಗಳಲ್ಲಿ 15 ದಿನಗಳ ಅವಧಿಯಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ನಡೆಸಲಾಯಿತು. 32 ಸಾವಿರ ರೈತರು ಕಾರ್ಯಕ್ರಮದ ಸದುಪಯೋಗ ಪಡೆದಿದ್ದಾರೆ’ ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಎ.ಆರ್. ಕುರುಬರ, ಸಹಾಯಕ ಕೃಷಿ ನಿರ್ದೇಶಕಿ ದೀಪಾ ಕುಲಕರ್ಣಿ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಅಚ್ಯುತರೆಡ್ಡಿ ಮಾತನಾಡಿದರು.

ಅಭಿಯಾನದಲ್ಲಿ ಕೇಂದ್ರ, ಸರ್ಕಾರದ ಭಾರತೀಯ ಕೃಷಿ ಅನುಸಂದಾನ ಪರಿಷತ್‍ನ ಸಂಸ್ಥೆಗಳು, ಕೃಷಿ ಇಲಾಖೆ, ಪಶುಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಅರಣ್ಯ ಇಲಾಖೆ ಮತ್ತು ನಬಾರ್ಡ್ ಹಾಗೂ ಇಪ್ಕೋ ಸಂಸ್ಥೆಯ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.

ಪ್ರತಿ ದಿನ ರೈತರೊಂದಿಗೆ ಕೃಷಿಯಲ್ಲಿನ ಹೊಸ ತಂತ್ರಜ್ಞಾನಗಳ ಮಾಹಿತಿ ನೀಡಲಾಯಿತು. ನೇರ ಸಂವಾದ ಕಾರ್ಯಕ್ರಮ ನಡೆಸಿ ಮಣ್ಣು ಪರಿಕ್ಷೆ, ಬೀಜೋಪಚಾರ, ಡ್ರೋಣ್ ಮೂಲಕ ರಸಗೊಬ್ಬರ ಸಿಂಪರಣೆಯ ಪ್ರಾತ್ಯಕ್ಷಿಕೆಗಳ ಬಗ್ಗೆ ಮಾಹಿತಿ ಒದಗಿಸಲಾಯಿತು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ಸಂಬಧಿತ ಯೋಜನೆಗಳ ಕುರಿತು ಮಾಹಿತಿ, ರೈತರ ಪ್ರತಿಕ್ರಿಯೆ ಮತ್ತು ಆವಿಷ್ಕಾರಗಳ ದಾಖಲೀಕರಣ ಮಾಡಿಕೊಳ್ಳಲಾಯಿತು.

ಹಾಪ್‍ಕಾಮ್ಸ್ ಜಿಲ್ಲಾಧ್ಯಕ್ಷ ನಾಗನಗೌಡ, ವಿಶ್ವಾಸ, ಸುಭಾಷ, ಉಮೇಶ, ಕೃಷಿ ಅಧಿಕಾರಿ ತ್ರಿವೇಣಿ, ಇಫ್ಕೋ ಸಂಸ್ಥೆಯ ಸಚಿನ್, ಮನೋಹರ ಸಾಹುಕಾರ, ವಸಂತರೆಡ್ಡಿ, ಗೊಪಾಲರೆಡ್ಡಿ, ಚಂದ್ರಶೇಖರ, ಶಂಕರಪ್ಪ ಉಪಸ್ಥಿತರಿದ್ದರು. ಶ್ರೀವಾಣಿ ಜಿ.ಎನ್ ನಿರೂಪಿಸಿದರು. ಮಲ್ಲರೆಡ್ಡಿ ವಂದಿಸಿದರು.

ರಾಯಚೂರಿನ ಡಿ.ರಾಂಪುರ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಆಯೋಜಿಸಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನದಲ್ಲಿ ಡ್ರೋಣ್ ಮೂಲಕ ರಸಗೊಬ್ಬರ ಸಿಂಪರಣೆಯ ಪ್ರಾತ್ಯಕ್ಷಿಕೆ ನೀಡಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.