ADVERTISEMENT

‘ಭಾರತವೇ ಜಗತ್ತಿನ ಪ್ರಜಾಪ್ರಭುತ್ವದ ಪಿತಾಮಹ’

ಏಮ್ಸ್ ಹೋರಾಟಗಾರ ಬಸವರಾಜ್ ಕಳಸದ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 15:54 IST
Last Updated 26 ಜೂನ್ 2025, 15:54 IST
ರಾಯಚೂರಿನ ಶ್ರೀಗಿರಿ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ 43ನೇ ಶಿವಾನುಭವ ಚಿಂತನ ಗೋಷ್ಠಿಯನ್ನು ಏಮ್ಸ್ ಹೋರಾಟಗಾರ ಬಸವರಾಜ್ ಕಳಸದ ಉದ್ಘಾಟಿಸಿದರು. ನಿವೃತ್ತ ಪ್ರಾಚಾರ್ಯ ದೇವರೆಡ್ಡಿ, ಮಿಟ್ಟಿ ಮಲ್ಕಾಪುರ ಶಾಂತಾಶ್ರಮದ ಸ್ವಾಮೀಜಿ ಉಪಸ್ಥಿತರಿದ್ದರು
ರಾಯಚೂರಿನ ಶ್ರೀಗಿರಿ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ 43ನೇ ಶಿವಾನುಭವ ಚಿಂತನ ಗೋಷ್ಠಿಯನ್ನು ಏಮ್ಸ್ ಹೋರಾಟಗಾರ ಬಸವರಾಜ್ ಕಳಸದ ಉದ್ಘಾಟಿಸಿದರು. ನಿವೃತ್ತ ಪ್ರಾಚಾರ್ಯ ದೇವರೆಡ್ಡಿ, ಮಿಟ್ಟಿ ಮಲ್ಕಾಪುರ ಶಾಂತಾಶ್ರಮದ ಸ್ವಾಮೀಜಿ ಉಪಸ್ಥಿತರಿದ್ದರು   

ರಾಯಚೂರು: ‘ಪ್ರಜಾ ಪ್ರಭುತ್ವದ ಕಲ್ಪನೆ ಇಟ್ಟುಕೊಂಡು ಅನುಭವ ಮಂಟಪ ಎಂಬ ಸಂಸತ್ತಿನಲ್ಲಿ ವಚನಗಳ ಪ್ರಸ್ತುತಿ ಆಗುತ್ತಿತ್ತು. ಹಾಗಾಗಿ ಭಾರತವೇ ಜಗತ್ತಿನ ಪ್ರಜಾಪ್ರಭುತ್ವದ ಪಿತಾಮಹ ಎಂದು ಪ್ರತಿಪಾದಿಸಬಹುದಾಗಿದೆ‘ ಎಂದು ಏಮ್ಸ್ ಹೋರಾಟಗಾರ ಬಸವರಾಜ್ ಕಳಸದ ಅಭಿಪ್ರಾಯಪಟ್ಟರು.

ಮಾರುತಿ ನಗರದ ಶ್ರೀಗಿರಿ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ 43ನೇ ಶಿವಾನುಭವ ಚಿಂತನ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಹನ್ನೆರಡನೇ ಶತಮಾನದಲ್ಲೇ ಶಿವ ಶರಣರು ಅನುಭವ ಮಂಟಪದಲ್ಲಿ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವ ಕೆಲಸವನ್ನು ತಮ್ಮ ವಚನಗಳ ಮೂಲಕ ಮಾಡಿದ್ದಾರೆ‘ ಎಂದು ತಿಳಿಸಿದರು.

‘ಶರಣರು ವಿಶ್ವಗುರು ಬಸವಣ್ಣ ರಾದಿಯಾಗಿ ಅನುಭವ ಮಂಟಪದಲ್ಲಿ ಶರಣರ ವಚನಗಳಿಂದ ಸಮಾಜದ ಸುಧಾರಣೆಗೆ ಅನುಕೂಲವಾಗುವ ಕೆಲಸ ಆಗುತ್ತಿತ್ತು. ಡಾ. ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನದ ಆಶಯಗಳು ಕೂಡ ಒಂದೇ ಆಗಿದೆ‘ ಎಂದು ತಿಳಿಸಿದರು.

‘ಭಾರತದ ಸಂಸ್ಕೃತಿ ಮೌಲ್ಯಗಳು ಜಗತ್ತಿಗೆ ದಾರಿ ದೀಪವಾಗಿವೆ. ಭಾರತ ಶಾಂತಿ ಸಹನೆಗೆ ಹೆಸರಾಗಿದೆ’ ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯ ದೇವರೆಡ್ಡಿ ಉಪನ್ಯಾಸ ನೀಡಿದರು. ಮಿಟ್ಟಿ ಮಲ್ಕಾಪುರ ಶಾಂತಾಶ್ರಮದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಶ್ರೀನಿವಾಸ್ ಸೋಮಶೆಟ್ಟಿ ರವಿ ಎಲೆಕ್ಟ್ರಿಕಲ್ಸ್ ಸುರೇಶ ಶಿವಶಂಕರ ಟ್ರಾಸ್‌ಪೋರ್ಟ್ಸ್, ಬಂಡೇಶ ವಲ್ಕಂದಿನ್ನಿ , ಕೆ.ವೇಣುಗೋಪಾಲ, ವೀರೇಶ ಕರ್ಲಿ ಉಪಸ್ಥಿತರಿದ್ದರು

ಮರ್ಲಿಂಗಪ್ಪ ಸ್ವಾಗತಿಸಿದರು. ಕರಿಯಪ್ಪ ಪ್ರಾರ್ಥಿಸಿದರು. ಭೀಮಣ್ಣ ಗಂಗವಾರ್ ಕಾರ್ಯಕ್ರಮ ನಿರೂಪಿಸಿದರು. ರಾಮಣ್ಣ ಮ್ಯಾದರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.