
ಮುದಗಲ್: ಮೊಹರಂ ಹಬ್ಬದ ನಿಮಿತ್ತ ಪುರಸಭೆ ಸಭಾಂಗಣದಲ್ಲಿ ಕೋಟೆಯ ಕಾಟೆ ದರ್ವಾಜ್ ಮುಂಭಾಗ ವಿವಿಧ ಅಂಗಡಿಗಳ, ಜೋಕಾಲಿ ನೆಲಬಾಡಿಗೆ ಹರಾಜು ಶನಿವಾರ ಜರುಗಿತು.
ಅಂಗಡಿಗಳ ನೆಲ ಬಾಡಿಗೆ ತೆರಿಗೆ ವಸೂಲಾತಿ ಹರಾಜು ₹ 4.26 ಲಕ್ಷಕ್ಕೆ ಮುರ್ತುಜಾಜಾ ಸಾಬ ಖಾಜಾ ಸಾಬ ಹಳೆಪೇಟೆ ಪಡೆದರು.
ಜೋಕಾಲಿ ಹಾಗೂ ಮಕ್ಕಳ ಆಟಿಕೆ ಸಾಮಾಗ್ರಿಗಳನ್ನು ಅಳವಡಿಸಲು ನೆಲ ಬಾಡಿಗೆ ಹರಾಜು ಜೂ.24ರಂದು ಮರು ಹರಾಜು ಮಾಡುತ್ತೇವೆ. ಶನಿವಾರ ಜೋಕಾಲಿ ಹರಾಜಿನಲ್ಲಿ ಒಬ್ಬರೇ ಭಾಗವಹಿಸಿದ್ದರು. ಇದರಿಂದ ಹರಾಜು ಮುಂದೂಡಿದ್ಡೇವೆ ಎಂದು ಎಂದು ಪುರಸಭೆ ಮುಖ್ಯಾಧಿಕಾರಿ ಪ್ರವೀಣ ಭೋಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹರಾಜು ವೇಳೆ ಪುರಸಭೆ ಉಪಾಧ್ಯಕ್ಷ ಅಜಮೀರ್ ಬೆಳ್ಳಕಟ್, ಸದಸ್ಯರಾದ ಮಹೆಬೂಬ ಕಡ್ಡಪುಡಿ, ದುರಗಪ್ಪ ಕಟ್ಟಮನಿ, ಬಾಬು ಉಪ್ಪಾರ, ತಸ್ಲಿಂ ಮುಲ್ಲಾ, ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.