ADVERTISEMENT

ಮಾನ್ವಿ: ಹಳ್ಳದ ನೀರಿನಲ್ಲಿ ಸಿಲುಕಿದ ಬಸ್

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 15:59 IST
Last Updated 12 ಜೂನ್ 2025, 15:59 IST
ಮಾನ್ವಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪ ಗುರುವಾರ ರಸ್ತೆ ಮಧ್ಯದ ನೀರಿನಲ್ಲಿ ಸಿಲುಕಿದ್ದ ಬಸ್
ಮಾನ್ವಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪ ಗುರುವಾರ ರಸ್ತೆ ಮಧ್ಯದ ನೀರಿನಲ್ಲಿ ಸಿಲುಕಿದ್ದ ಬಸ್   

ಮಾನ್ವಿ: ಪಟ್ಟಣದ ಹೊರ ವಲಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮೀಪ ಹಳ್ಳದಲ್ಲಿ ಕೆಕೆಆರ್‌ಟಿಸಿ ಬಸ್‌ ಸಲುಕಿತ್ತು.

ಹಳ್ಳದ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಗುರುವಾರ ಹಳ್ಳದಲ್ಲಿ ನೀರು ಸಂಗ್ರಹವಾಗಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಹಳ್ಳದ ನೀರಿನಲ್ಲಿ ಸಿಲುಕಿದ ಸಾರಿಗೆ ಬಸ್ ದಾಟಲು ತೊಂದರೆಯಾಯಿತು.

ಅಧಿಕ ಪ್ರಮಾಣದ ನೀರು ಸಂಗ್ರಹವಾದ ಕಾರಣ ಸುಮಾರು ಒಂದು ತಾಸು ಸಂಚಾರ ಸಾಧ್ಯವಾಗದೆ ವಾಹನಗಳ ಸವಾರರು ಪರದಾಡಿದರು. ನೀರಿನ ಹರಿವು ಕಡಿಮೆಯಾದ ನಂತರ ವಾಹನಗಳ ಸುಗಮ ಸಂಚಾರ ಮತ್ತೆ ಆರಂಭವಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.