
ರಾಯಚೂರು: ರಸ್ತೆ ಬದಿಗೆ ನಿಂತಿದ್ದ ತಂದೆ ಮಗನ ಮೇಲೆ ಲಾರಿ ಹಾಯ್ದು ಮೃತಪಟ್ಟ ಬೆನ್ನಲ್ಲೇ ಮಹಾನಗರಪಾಲಿಕೆ ಅಧಿಕಾರಿಗಳು ಹೊರವಲಯದ ಯರಮರಸ್ ಬೈಪಾಸ್ ಬಳಿ ಸೋಮವಾರ ಅತಿಕ್ರಮಣ ತೆರವು ಕಾರ್ಯಾಚರಣೆ ಆರಂಭಿಸಿದರು.
ಮಟನ್‌ಶಾಪ್‌ಗಳು, ಡಾಬಾಗಳ ಫಲಕಗಳು, ಶೆಡ್‌ಗಳನ್ನು ಜೆಸಿಬಿಯಿಂದ ತೆರವುಗೊಳಿಸಲಾಯಿತು. ಮತ್ತೆ ನಿರ್ಮಾಣಮಾಡದಂತೆ ಶೆಡ್‌ಗಳನ್ನು ಧ್ವಂಸಗೊಳಿಸಲಾಯಿತು.
ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿರುವ ಮಾಹಿತಿ ದೊರಕುತ್ತಿದ್ದಂತೆಯೇ ಶೆಡ್‌ಗಳ ಮಾಲೀಕರು ಸ್ಥಳಕ್ಕೆ ಬಂದು ಸ್ವಯಂ ಪ್ರೇರಣೆಯಿಂದ ಶೆಡ್ ಹಾಗೂ ಫಲಕಗಳನ್ನು ಕಿತ್ತುಕೊಂಡರು.
ಅತಿಕ್ರಮಣಕಾರರಿಗೆ ಹಲವು ಬಾರಿ ನೋಟಿಸ್ ನೀಡಿದ್ದರೂ ಅತಿಕ್ರಮಣ ತೆರವುಗೊಳಿಸಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಜೆಸಿಬಿ ಬಳಸಿ ಅತಿಕ್ರಮಣ ತೆರವುಗೊಳಿಸಬೇಕಾಯಿತು ಎಂದು ಮಹಾನಗರಪಾಲಿಕೆ ಅಧಿಕಾರಿಗಳು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.