ADVERTISEMENT

ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಅಭಿಯಾನ: ವೀರಾರೆಡ್ಡಿ

ನಗರ ಪೊಲೀಸ್‌ ಠಾಣೆಯಿಂದ ವಿಶೇಷ ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 7:54 IST
Last Updated 2 ಡಿಸೆಂಬರ್ 2025, 7:54 IST
<div class="paragraphs"><p>ವೀರಾರೆಡ್ಡಿ&nbsp;&nbsp;</p></div>

ವೀರಾರೆಡ್ಡಿ  

   

ಸಿಂಧನೂರು: ‘ನಗರ ವ್ಯಾಪ್ತಿಯಲ್ಲಿ ನಡೆಯುವಂತಹ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಕ್ರಮವಹಿಸಲಾಗಿದ್ದು, ವಿಶೇಷ ತಂಡ ರಚಿಸಿ ಕಾರ್ಯಾಚರಣೆಯ ಅಭಿಯಾನ ನಡೆಸಲಾಗುತ್ತಿದೆ’ ಎಂದು ಶಹರ ಪೊಲೀಸ್‌ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್‌ ವೀರಾರೆಡ್ಡಿ ತಿಳಿಸಿದ್ದಾರೆ.

ಸೋಮವಾರ ಹೇಳಿಕೆ ನೀಡಿರುವ ಅವರು, ‘ನಗರದಲ್ಲಿ ಮಟ್ಕಾ, ಇಸ್ಪೀಟ್, ಜೂಜಾಟಗಳು ನಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ನಿಗಾವಹಿಸಲು ನಗರ ಪೊಲೀಸ್‌ ಠಾಣೆಯಿಂದ ವಿಶೇಷ ತಂಡ ರಚಿಸಲಾಗಿದೆ. ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿನಿಯರಿಗೆ ಚುಡಾಯಿಸುವ, ಕಿರಿಕಿರಿ ಮಾಡುವ ಪೋಲಿಗಳಿಗೆ ಕಡಿವಾಣ ಹಾಕಲು ಎಎಸ್‍ಐ ಒಬ್ಬರ ನೇತೃತ್ವದಲ್ಲಿ 6 ಜನ ಪೇದೆಗಳ ರೋಡ್ ರೋಮಿಯೋ ಪೆಟ್ರೋಲಿಂಗ್ ದಳ ರಚಿಸಲಾಗಿದೆ. ಈ ತಂಡವೂ ಬೆಳಗ್ಗೆ 8 ಗಂಟೆಯಿಂದ ಸಂಜೆಯವರೆಗೆ ನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿದೆ’ ಎಂದು ಹೇಳಿದ್ದಾರೆ.

ADVERTISEMENT

ಡ್ರಗ್ ಸೇವನೆ ಮತ್ತು ಮಾರಾಟ ನಿಗ್ರಹಕ್ಕೆ ಎಎಸ್‍ಐ ನೇತೃತ್ವದಲ್ಲಿ 6 ಜನ ಪೊಲೀಸರನ್ನು ನೇಮಿಸಿದ್ದು, ಈ ತಂಡವೂ ಸಂಜೆ 6 ಗಂಟೆಯಿಂದ ತಡರಾತ್ರಿಯವರೆಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಅಪರಾಧ ವಿಭಾಗದ ಪೊಲೀಸ್‌ ಸಿಬ್ಬಂದಿಯಿಂದಲೂ ನಿರಂತರ ಕಾರ್ಯಾಚರಣೆ ನಡೆಯಲಿದೆ. ಈಗಾಗಲೇ ಕಳೆದೊಂದು ವಾರದಲ್ಲಿ ರೋಡ್ ರೋಮಿಯೋ ಪೆಟ್ರೋಲಿಂಗ್ ಪೊಲೀಸರ ತಂಡ 5 ಕೇಸುಗಳು ಹಾಗೂ ಡ್ರಗ್ ಕಂಟ್ರೊಲಿಂಗ್‌ ತಂಡದಿಂದ 1 ಕೇಸನ್ನು ದಾಖಲಿಸಿ ಕಾನೂನು ಕ್ರಮಕ್ಕೆ ಸಲ್ಲಿಸಲಾಗಿದೆ’ ಎಂದು ವಿವರಿಸಿದ್ದಾರೆ.

ಸಿಂಧನೂರು ನಗರ ಪೊಲೀಸ್‌ ಠಾಣೆಯ ಪೊಲೀಸರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವ ಜೊತೆ ಜೊತೆಗೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವಂತಹ ವ್ಯಕ್ತಿಗಳಿಗೆ ಎಡೆಮುರಿ ಕಟ್ಟಲು ನಿರಂತರವಾಗಿ ಶ್ರಮಿಸುತ್ತಿದ್ದು, ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ವಿದ್ಯಾರ್ಥಿನಿಯರಿಗೆ ಚುಡಾಯಿಸುವುದು, ಅಕ್ರಮ ಚಟುವಟಿಕೆಗಳನ್ನು ನಡೆಸುವುದು ಕಂಡು ಬಂದಲ್ಲಿ 9480803861 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಿಳಿಸಲು ಪಿಐ ವೀರಾರೆಡ್ಡಿ ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.