ADVERTISEMENT

ಚನ್ನಪಟ್ಟಣ: ಕನ್ನಡವೇ ನಿತ್ಯ, ಕನ್ನಡವೇ ಸತ್ಯ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 6:30 IST
Last Updated 2 ನವೆಂಬರ್ 2025, 6:30 IST
ಚನ್ನಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಉಪನ್ಯಾಸಕ ಬಿ.ಪಿ. ಸುರೇಶ್, ಬಿ.ಆರ್. ಶಿವಕುಮಾರ್ ಬ್ಯಾಡರಹಳ್ಳಿ, ಇತರರು ಹಾಜರಿದ್ದರು
ಚನ್ನಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಉಪನ್ಯಾಸಕ ಬಿ.ಪಿ. ಸುರೇಶ್, ಬಿ.ಆರ್. ಶಿವಕುಮಾರ್ ಬ್ಯಾಡರಹಳ್ಳಿ, ಇತರರು ಹಾಜರಿದ್ದರು   

ಚನ್ನಪಟ್ಟಣ: ರಾಜ್ಯೋತ್ಸವದಂದು ಸಿರಿ ಸಾಮಾಜಿಕ ಮತ್ತು ಶಿಕ್ಷಣ ಟ್ರಸ್ಟ್ ಕನ್ನಡ ಭಾಷೆ, ನೆಲ, ಜಲ, ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿತ್ತು.

ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉಪನ್ಯಾಸಕ ಬಿ.ಪಿ. ಸುರೇಶ್ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕನ್ನಡ ರಾಜ್ಯೋತ್ಸವವು ನಾಡಿನ ಏಕತೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕ. ಕನ್ನಡಿಗರು ಭಾಷಾ ಅಭಿಮಾನ ಬೆಳಸಿಕೊಳ್ಳುವ ಅಗತ್ಯವಿದೆ ಎಂದರು.

ಕರ್ನಾಟಕದಲ್ಲಿ ಕನ್ನಡವೇ ಮೊದಲು. ನಾಡಿನಾದ್ಯಂತ ಪ್ರತಿಯೊಬ್ಬರು ವ್ಯವಹಾರಿಕ ಭಾಷೆಯಾಗಿ ಕನ್ನಡವನ್ನೇ ಬಳಸಬೇಕು, ಕನ್ನಡವನ್ನು ಬೆಳೆಸಬೇಕು ಎಂದು ಬಿ.ಆರ್. ಶಿವಕುಮಾರ್ ಬ್ಯಾಡರಹಳ್ಳಿ ಹೇಳಿದರು. 

ADVERTISEMENT

 
ಭಾವಿಪ ಅಧ್ಯಕ್ಷ ಗುರುಮಾದಯ್ಯ, ನಿವೃತ್ತ ಫಾರ್ಮಸಿ ಅಧಿಕಾರಿ ಎಂ. ವೇದಮೂರ್ತಿ, ಸಮರ್ಪಣಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಎಸ್.ಆರ್.ಮನುಜ, ಪತ್ರಕರ್ತ ಎಲೆಕೇರಿ ಮಂಜುನಾಥ್, ಅಪ್ಪಾಜಿಗೌಡ, ಭರತ್ ಕುಮಾರ್ ಭಾಗವಹಿಸಿದ್ದರು.

ಟ್ರಸ್ಟ್ ಕಾರ್ಯದರ್ಶಿ ಎಸ್. ಪೂರ್ಣಿಮಾ ಪ್ರಾಸ್ತಾವಿಕ ಮಾತನಾಡಿದರು. ಗಾಯಕರಾದ ಗುಬ್ಬಿ ಆನಂದ್, ಭರತ್ ಕುಮಾರ್ ಕನ್ನಡ ನಾಡುನುಡಿ ಬಿಂಬಿಸುವ ಗಾಯನ ನಡೆಸಿಕೊಟ್ಟರು. ಬಿವಿಎಸ್ ಸಂಚಾಲಕ ಎಸ್. ಕುಮಾರ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.