
ಚನ್ನಪಟ್ಟಣದಲ್ಲಿ ನಡೆದ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪ್ರಮೋದ್ ಉದ್ಘಾಟಿಸಿದರು. ತಹಶೀಲ್ದಾರ್ ಬಿ.ಎನ್.ಗಿರೀಶ್, ನಗರಸಭೆ ಅಧ್ಯಕ್ಷ ವಾಸಿಲ್ ಆಲಿಖಾನ್, ಇತರರು ಹಾಜರಿದ್ದರು
ಚನ್ನಪಟ್ಟಣ: ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಶನಿವಾರ ಇಲ್ಲಿಯ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅದ್ದೂರಿಯಾಗಿ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಆಯೋಜಿಸಲಾಗಿತ್ತು.
ತಹಶೀಲ್ದಾರ್ ಬಿ.ಎನ್.ಗಿರೀಶ್ ಧ್ವಜಾರೋಹಣ ನೆರವೇರಿಸಿದರು. ಹಲವು ಹಿರಿಯರ ತ್ಯಾಗ, ಪರಿಶ್ರಮದಿಂದ ಅಖಂಡ ಕರ್ನಾಟಕ ಅಸ್ತಿತ್ವಕ್ಕೆ ಬಂದಿದೆ. ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿರುವ ರಾಜ್ಯ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು.
ಕನ್ನಡ ಭಾಷೆ ಸಂಪೂರ್ಣ ಅನುಷ್ಠಾನಕ್ಕೆ ನೂರಾರು ಸರ್ಕಾರಿ ಆದೇಶ ಹೊರ ಬಂದರೂ ಇಂದಿಗೂ ಕನ್ನಡ ಭಾಷೆ ಆಡಳಿತದಲ್ಲಿ ಸೂಕ್ತವಾಗಿ ಜಾರಿಯಾಗಿಲ್ಲ. ಶಿಕ್ಷಣ, ಆಡಳಿತದಲ್ಲಿ ಕನ್ನಡ ಭಾಷೆಯನ್ನು ಪ್ರಧಾನವಾಗಿ ಬಳಸಿದರೆ ಕನ್ನಡ ಭಾಷೆ ಉಳಿಯಲು ಮತ್ತು ಬೆಳೆಯಲು ಸಾಧ್ಯ ಎಂದು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಕೆ.ಆರ್. ಇಂದ್ರಮ್ಮ ಅಭಿಪ್ರಾಯಪಟ್ಟರು.
ನೆಲ ಜಲ, ಭಾಷೆ, ಗಡಿ ಸಮಸ್ಯೆಯನ್ನು ಇಂದಿಗೂ ಎದುರಿಸುತ್ತಿದ್ದೇವೆ. ಕನ್ನಡಾಭಿಮಾನವನ್ನು ಪ್ರತಿ ದಿನ, ಪ್ರತಿ ಕ್ಷಣ ಬೆಳೆಸಿಕೊಂಡಾಗ ಮಾತ್ರ ಕನ್ನಡ ರಾಜ್ಯೋತ್ಸವ ಆಚರಣೆಗೆ ಮತ್ತಷ್ಟು ಗೌರವ ಬರುತ್ತದೆ ಎಂದರು.
ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪ್ರಮೋದ್ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ವಾಸಿಲ್ ಆಲಿಖಾನ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ರಂಗನಾಥ್, ಜಿಲ್ಲಾ ಉಪಾಧ್ಯಕ್ಷ ಅಕ್ಕೂರು ಶೇಖರ್, ತಾ.ಪಂ. ಇಒ ಸಂದೀಪ್, ನಗರಸಭೆ ಪೌರಾಯುಕ್ತ ಎಂ. ಮಹೇಂದ್ರ, ಬಿಆರ್‌ಸಿ ರಾಜಶೇಖರ್, ನಗರಸಭಾ ಸದಸ್ಯರಾದ ಲಿಯಾಕತ್ ಆಲಿಖಾನ್, ಮಹಮದ್ ಸಾಬೀರ್, ಮತೀನ್ ಖಾನ್, ನಾಗೇಶ್, ಸರ್ವಮಂಗಳ, ತಿಮ್ಮರಾಜು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿದ್ದರಾಜು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಸುಧೀಂದ್ರ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಚಕ್ಕೆರೆ ಯೋಗೇಶ್ ನಿರೂಪಿಸಿದರು. ವಿವಿಧ ಶಾಲೆಗಳ ಮಕ್ಕಳು ಆಕರ್ಷಕ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಲವು ಸಾಧಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಆರ್.ಸೋನಿಯಾ (ಆರೋಗ್ಯ ಇಲಾಖೆ) ಭೂಹಳ್ಳಿ ಶಿವಲಿಂಗಮ್ಮ (ಅಂಗನವಾಡಿ ಕಾರ್ಯಕರ್ತೆ) ಅರುಣ (ಪ್ರಾಂಶುಪಾಲರು) ಎಂ.ಆರ್. ಕೀರ್ತನಾ ಮತ್ತು ರಾಜು (ಶಿಕ್ಷಣ) ಎ.ಟಿ. ವೆಂಕಟೇಶ್ ಪ್ರಭು (ಮಾಧ್ಯಮ) ಜಗದೀಶ್ (ಸುಳ್ಳೇರಿ ಪಿಡಿಒ) ಮಧುರ (ಹಿಂದುಳಿದ ವರ್ಗ ಇಲಾಖೆ) ಕೆ.ಎಸ್.ಮಂಜುನಾಥ್ (ಪೊಲೀಸ್ ಇಲಾಖೆ) ಎನ್.ಯೋಗೇಶ್ ಕುಮಾರ್ (ಸಾಹಿತ್ಯ) ನಾಗೇಶ್ (ಬೆಸ್ಕಾಂ) ಕೋಡಂಬಹಳ್ಳಿ ಸಾಕಮ್ಮ (ಬಿಸಿಯೂಟ) ನಂಜೇಗೌಡ (ಕೃಷಿ) ರಮ್ಯ (ಕಂದಾಯ) ಎ.ಎಸ್. ಪ್ರೇಮಾ (ಟ್ರಸ್ಟ್) ಎನ್. ಮೋಕ್ಷಜ್ಞ (ಪೊಲೀಸ್ ಇಲಾಖೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.