
ಸೊರಬ: ತಾಲ್ಲೂಕಿನ ಯಲಸಿ ಗ್ರಾಮದ ದೊಡ್ಡಕೆರೆ ಹೆಗ್ಗೆರೆಯಲ್ಲಿ ಗುರುವಾರ ಜನಪದ ಕ್ರೀಡೆ ಮೀನು ಶಿಕಾರಿ ಭರ್ಜರಿಯಾಗಿ ಜರುಗಿತು.
ಮಳೆಗಾಲದ ಸಂದರ್ಭದಲ್ಲಿ ಕೆರೆಗಳಿಗೆ ಮೀನಿನ ಮರಿಗಳನ್ನು ಬಿಡಲಾಗುತ್ತದೆ. ಬೇಸಿಗೆಯಲ್ಲಿ ಕೆರೆಗಳು ಬತ್ತಿದಾಗ ಕೆರೆಬೇಟೆ ಸಾರಲಾಗುತ್ತದೆ. ಈ ವೇಳೆ ಗ್ರಾಮಸ್ಥರಲ್ಲಿ ಎಲ್ಲಿಲ್ಲದ ಸಡಗರ.
ಗ್ರಾಮದಲ್ಲಿ ನಡೆದ ಕೆರೆಬೇಟೆಯಲ್ಲಿ ಕೂಣಿಗೆ ಅವಕಾಶ ಕಲ್ಪಿಸಲಾಗಿತ್ತು. ಗ್ರಾಮಸ್ಥರು ಮಾತ್ರವಲ್ಲದೇ ಸುತ್ತಲಿನ ಗ್ರಾಮದವರು ಜಾತಿ, ಮತಗಳ ಭೇದವಿಲ್ಲದೆ, ಹಿರಿಯರು, ಕಿರಿಯರೆನ್ನೆದೇ ಕೆರೆಬೇಟೆಯಲ್ಲಿ ಪಾಲ್ಗೊಂಡಿದ್ದರು. ಕೆಲವರಿಗೆ ಸುಮಾರು 15ಕೆ.ಜಿ ವರೆಗೆ ಮೀನು ಲಭಿಸಿತು.
ಗ್ರಾಮಸ್ಥರು ಸುಮಾರು 15ರಿಂದ 20 ಕೆಜಿವರೆಗಿನ ಮೀನುಗಳನ್ನು ಹಿಡಿದು ಸಂಭ್ರಮಿಸಿದರು. ಸುತ್ತಲಿನ ಹುಲ್ತಿಕೊಪ್ಪ, ಕೊರಕೋಡು, ಗುನ್ನೂರು, ಕಾರೆಹೊಂಡ, ಕೊಡಕಣಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಗ್ರಾಮ ಸಮಿತಿಯವರು ಯಾವುದೇ ಗಲಾಟೆ ಮತ್ತು ಗೊಂದಲಗಳಿಗೆ ಅವಕಾಶ ನೀಡದಂತೆ ಅಚ್ಚುಕಟ್ಟಾಗಿ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.