ADVERTISEMENT

ಕುಂಚಿಟಿಗ ಸ್ವತಂತ್ರ ಸಮುದಾಯ

ಕುಂಚಿಟಿಗ ಸಂಘದ ನೂತನ ಭವನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 6:39 IST
Last Updated 1 ನವೆಂಬರ್ 2025, 6:39 IST
ಮಧುಗಿರಿ ತಾಲ್ಲೂಕು ಕುಂಚಿಟಿಗರ ಸಂಘದಿಂದ ದಾನಿಗಳನ್ನು ಸತ್ಕರಿಸಲಾಯಿತು
ಮಧುಗಿರಿ ತಾಲ್ಲೂಕು ಕುಂಚಿಟಿಗರ ಸಂಘದಿಂದ ದಾನಿಗಳನ್ನು ಸತ್ಕರಿಸಲಾಯಿತು   

ಮಧುಗಿರಿ: ಕುಂಚಿಟಿಗ ಸಮುದಾಯ ಸ್ವತಂತ್ರ ಸಮಾಜವಾಗಿದ್ದು, ಐದು ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಎಲೆರಾಂಪುರ ಕುಂಚಿಟಿಗ ಮಠದ ಪೀಠಾಧ್ಯಕ್ಷ ಹನುಮಂತನಾಥ ಸ್ವಾಮೀಜಿ ತಿಳಿಸಿದರು‌.

ಪಟ್ಟಣದ ತಾಲ್ಲೂಕು ಕುಂಚಿಟಿಗರ ಸಂಘದಿಂದ ಶುಕ್ರವಾರ ನಡೆದ ಕುಂಚಿಟಿಗ ಸಂಘದ ನೂತನ ಭವನ ಉದ್ಘಾಟನೆ ಮತ್ತು ದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ರಾಜ್ಯದ 17 ಜಿಲ್ಲೆಯ 47 ತಾಲ್ಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದೇವೆ. ಕುಂಟಿಗ ಸಮಾಜ ಜಾಗೃತರಾಗುವ ಆರ್ಥಿಕ, ಸಾಮಾಜಿಕ ಶೈಕ್ಷಣಿಕ ಮತ್ತು ರಾಜಕೀಯವಾಗಿ ಸದೃಡರಾಬೇಕು’ ಎಂದು ತಿಳಿಸಿದರು.

ADVERTISEMENT

‘ತಮಿಳುನಾಡಿನ ಕುಂಚಟಿಗರಿಗಿರುವ ಪ್ರಾಮಾಣಿಕತೆ ರಾಜ್ಯದ ಕುಂಚಟಿಗರಿಗಿಲ್ಲವಾಗಿದೆ. ತಮಿಳುನಾಡಿನಲ್ಲಿ ಇಬ್ಬರು ಶಾಸಕರು ಆಯ್ಕೆಯಾಗಿದ್ದಾರೆ. ನಮ್ಮಲ್ಲೂ ಆ ಮನೋಭಾವ ಬೆಳೆಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಮುರುಳೀಧರ ಹಾಲಪ್ಪ, ಕೊಂಡವಾಡಿ ಚಂದ್ರಶೇಖರ್ ಹಾಗೂ ಟಿ.ರಾಮಣ್ಣ ಅವರಿಗೆ ರಾಜಕೀಯ ಅಧಿಕಾರ ಸಿಗುವಂತಾಗಬೇಕು’ ಎಂದು ತಿಳಿಸಿದರು.

ಶಾಸಕ ಸುರೇಶ್ ಗೌಡ ಮಾತನಾಡಿ, ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಕುಂಚಿಟಿಗ ಸಮಾಜ ಪ್ರಾಬಲ್ಯ ಹೊಂದಿದೆ. ರಾಜಕೀಯ ಅಧಿಕಾರವಂಚಿತ ಕುಂಚಿಟಿಗ ಸಮುದಾಯಕ್ಕೆ ಒಬಿಸಿ ಮೀಸಲಾತಿ ನೀಡಬೇಕಿದೆ ಎಂದರು. 

ಕೌಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಸಮುದಾಯದ ಸಮಾರಂಭಗಳಿಗೆ ಅಧಿಕಾರಿಗಳನ್ನು ಕರೆಸಬೇಕು. ಇದರಿಂದ ಮಕ್ಕಳಿಗೆ ಸ್ಫೂರ್ತಿ ಸಿಗುತ್ತದೆ. ಕುಂಚಿಟಿಗರು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಕಾರ್ಯಕ್ರಮಗಳಿಗೆ ಭಾಗವಹಿಸಬೇಕಿದೆ. ಹೆಣ್ಣು ಮಕ್ಕಳು ಸಂಘಟಿತರಾಗಬೇಕು  ಎಂದು ತಿಳಿಸಿದರು.

ಕುಂಚಿಟಿಗ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಡಿ.ಎಸ್. ಸಿದ್ದಪ್ಪ, ಅಧ್ಯಕ್ಷ ಪಿ.ಎನ್. ರಾಜಶೇಖರ್, ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಚೇತನ ವಿದ್ಯಾಸಂಸ್ಥೆ ಕಾರ್ಯದರ್ಶಿ ಟಿ.ರಾಮಣ್ಣ , ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶಿ ಉಮೇಶ್, ಜಂಟಿ ಕಾರ್ಯದರ್ಶಿ ಜಯರಾಮಯ್ಯ, ಖಜಾಂಚಿ ರಾಮಚಂದ್ರಪ್ಪ ಕುಂಚಿಟಿಗ ನೌಕರರ ಸಂಘದ ಅಧ್ಯಕ್ಷ ಕರೇಗೌಡ, ಲಕ್ಷ್ಮಿ ಮಹಿಳಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಮಾಜಿ ಅಧ್ಯಕ್ಷ ಸಾವಿತ್ರಮ್ಮ ಶಂಕ್ರಪ್ಪ, ನಿರ್ದೇಶಕ ನರೇಂದ್ರಬಾಬು, ದೇವರಾಜು ಮೋಹನ್, ಕಾಳೇಗೌಡ, ರೈತ ಸಂಘದ ಕಾರ್ಯದರ್ಶಿ ಶಂಕರಪ್ಪ, ಜಿಲ್ಲಾ ಕುಂಚಟಿಗ ಮಹಿಳಾ ಸಂಘದ ಅಧ್ಯಕ್ಷೆ ಲಲಿತಾ ಮಲ್ಲಪ್ಪ, ನಿವೃತ್ತ ಅಧಿಕಾರಿ ರಂಗಶಾಮಣ್ಣ, ವ್ಯವಸ್ಥಾಪಕ ರಾಮಕೃಷ್ಣಪ್ಪ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.