
ಪ್ರಜಾವಾಣಿ ವಾರ್ತೆ
ಕೊಲೆ
ತುಮಕೂರು: ನಗರದ ಜಯನಗರದಲ್ಲಿ ಗುರುವಾರ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಕೊಲೆ ಮಾಡಲಾಗಿದೆ.
ಕ್ಯಾತ್ಸಂದ್ರದ ಅಭಿಷೇಕ (26) ಕೊಲೆಯಾದವರು. ಎಸ್.ಎಸ್.ಪುರಂನ ಮನೋಜ್ ಕೊಲೆಯ ಆರೋಪಿ. ಮನೋಜ್ ಮತ್ತು ಅಭಿಷೇಕ್ ಮಧ್ಯೆ ವಾರದ ಹಿಂದೆ ಬಾರ್ ನಲ್ಲಿ ಗಲಾಟೆ ನಡೆದಿತ್ತು.
ಇದೇ ವಿಚಾರವಾಗಿ ಮಾತನಾಡಲು ಮನೋಜ್ ಗುರುವಾರ ರಾತ್ರಿ ಅಭಿಷೇಕ್ ಬಳಿಗೆ ಹೋಗಿದ್ದರು. ಈ ವೇಳೆ ಮಾತಿಗೆ ಬೆಳೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಅಭಿಷೇಕ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮನೋಜ್ ಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.