
ಪ್ರಜಾವಾಣಿ ವಾರ್ತೆ
ಪ್ರಜಾವಾಣಿ ವಾರ್ತೆ
ಗೋಕರ್ಣ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಭದ್ರತೆ ಹಾಗೂ ಸಂಶಯಾಸ್ಪದ ಸ್ಥಳಗಳಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆ ಅಂಗವಾಗಿ ಪೊಲೀಸರು ಬುಧವಾರ ಗೋಕರ್ಣದ ವಿವಿಧೆಡೆ ತೀವ್ರ ತಪಾಸಣೆ ನಡೆಸಿದರು.
ಕಾರವಾರದ ಶ್ವಾನದಳದ ಸಮೇತ ಮಾದಕ ದ್ರವ್ಯ ವಿರೋಧಿ ವಿಧ್ವಂಸಕ ಪರಿಶೀಲನಾ ತಂಡ ಪೊಲೀಸರೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು. ಗೋಕರ್ಣದ ಬೇಲೆಹಿತ್ತಲು, ಬಿಜ್ಜೂರು, ಬೇಲೆಕಾನ್, ಕಹಾನಿ ಪ್ಯಾರಡೈಸ್, ಪ್ಯಾರಡೈಸ್ ಬೀಚ್‌ನಲ್ಲಿ ತಪಾಸಣೆ ನಡೆಸಲಾಯಿತು.
ಪೊಲೀಸ್ ನಿರೀಕ್ಷಕ ಶ್ರೀಧರ ಎಸ್.ಆರ್. ಉಪ ನಿರೀಕ್ಷಕರಾದ ಖಾದರ ಭಾಷಾ ಮತ್ತು ಶಶಿಧರ ಎಚ್. ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.