
ಪ್ರಜಾವಾಣಿ ವಾರ್ತೆಕಾರವಾರ: ನಕಲಿ ಐಎಸ್ಐ ಗುರುತು ಮತ್ತು ಪರವಾನಗಿ ಸಂಖ್ಯೆ ಹೊಂದಿದ್ದ ಇಲ್ಲಿನ ಗ್ಯಾಲಕ್ಸಿ ಫ್ಲೈವುಡ್ ಆ್ಯಂಡ್ ಹಾರ್ಡವೇರ್ ಮಳಿಗೆಯ ಮೇಲೆ ಭಾರತೀಯ ಮಾನದಂಡಗಳ ಬ್ಯುರೊದ (ಬಿಐಎಸ್) ಹುಬ್ಬಳ್ಳಿ ಶಾಖೆಯ ಉಪ ನಿರ್ದೇಶಕ ಎಂ.ಪ್ರದೀಪಕುಮಾರ್ ಮತ್ತು ಸಹಾಯಕ ನಿರ್ದೇಶಕ ಅಶುತೋಷ್ ಅಗರವಾಲ್ ನೇತೃತ್ವದ ತಂಡವು ಬುಧವಾರ ದಾಳಿ ನಡೆಸಿ, ಪರಿಶೀಲನೆ ನಡೆಸಿತು.
‘ಪರಿಶೀಲನೆ ವೇಳೆ ಫ್ಲೈವುಡ್ ಹಾಳೆಗಳ ಮೇಲೆ ಅನಧಿಕೃತವಾಗಿ ಐಎಸ್‌ಐ ಗುರುತು ಮಾಡಿರುವುದನ್ನು ಪತ್ತೆ ಹಚ್ಚಲಾಗಿದೆ. ನಕಲಿ ಐಎಸ್ಐ ಗುರುತು ಮತ್ತು ಪರವಾನಗಿ ಸಂಖ್ಯೆಯನ್ನು ಹೊಂದಿರುವ ಫ್ಲೈವುಡ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ಭಾರತೀಯ ಮಾನದಂಡಗಳ ಕಾಯ್ದೆ ದುರುಪಯೋಗ ಮಾಡಿರುವ ಹಿನ್ನೆಲೆಯಲ್ಲಿ ಮಳಿಗೆಯ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಉಪನಿರ್ದೇಶಕ ಎಂ.ಪ್ರದೀಪಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.