ಕೊಲ್ಹಾರ: ತಾಲ್ಲೂಕಿನ ಕೂಡಗಿ ಎನ್‌ಟಿಪಿಸಿಯಲ್ಲಿ (ನ್ಯಾಷನಲ್ ಥರ್ಮಲ್ ಪವರ್ ಪ್ರಾಜೆಕ್ಟ್) ಈಚೆಗೆ ಗರ್ಭಿಣಿಯರಿಗೆ ಪೌಷ್ಟಿಕಾಂಶದ ಕಿಟ್ ವಿತರಣೆ ಮಾಡಲಾಯಿತು.
ಬಸವನ ಬಾಗೇವಾಡಿಯ ತಾಲ್ಲೂಕು ಆರೋಗ್ಯ ಇಲಾಖೆ ಹಾಗೂ ಮಿತಾಲಿ ಮಹಿಳಾ ಸಮಿತಿಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ 160 ಗರ್ಭಿಣಿಯರಿಗೆ ಕಿಟ್ ನೀಡಲಾಯಿತು.
‘5ರಿಂದ 8ನೇ ತಿಂಗಳಲ್ಲಿ ಗರ್ಭಿಣಿಯರ ಆರೋಗ್ಯ ಕಾಪಾಡಲು ಹಾಗೂ ರಕ್ತಹೀನತೆ ತಡೆಗಟ್ಟುವ ಉದ್ದೇಶದಿಂದ ಕಿಟ್ ವಿತರಿಸಲಾಗಿದೆ. ತಾಯಿ ಮತ್ತು ಮಗು ಆರೋಗ್ಯದಿಂದಿರಲು ಇದು ಸಹಕಾರಿಯಾಗಿದೆ’ ಎಂದು ಮಿತಾಲಿ ಸಮಿತಿಯ ಅಧ್ಯಕ್ಷೆ ಅಂಜು ಝಾ ತಿಳಿಸಿದರು.
ಉಪಾಧ್ಯಕ್ಷೆ ಪ್ರೀತಿ ತಿವಾರಿ, ಎನ್‌ಟಿಪಿಸಿ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ರಾಜ್ ಬೊರ್ವಂಕರ್, ಮನೀಶಾ ಬೊರ್ವಂಕರ್, ಕಾಲಿಯಾ ಮೂರ್ತಿ, ಪೂಜಾ ಪಾಂಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.