ಯರಗೋಳ: ಸುತ್ತಲಿನ ಗ್ರಾಮಗಳಲ್ಲಿ ಗುರುವಾರ ರಾತ್ರಿ ಜೋರು ಮಳೆ ಸುರಿದಿದೆ. ರಸ್ತೆಗಳು ಕೊಚ್ಚಿಕೊಂಡು ಹೋಗಿವೆ.
ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ಹೆಸರು ಬೆಳೆಗೆ ಆಸರೆಯಾಗಿದೆ. ಹೊಲ–ಗದ್ದೆಗಳಲ್ಲಿ ನೀರು ನಿಂತಿದೆ. ಹಳ್ಳಗಳು ತುಂಬಿ ಹರಿಯುತ್ತಿವೆ.
ಓರುಂಚ–ಚಾಮನಹಳ್ಳಿ ನಡುವೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿಕೊಂಡು ಹೋಗಿದೆ.
ಬಹುತೇಕ ಕಡೆ ವಿದ್ಯುತ್ ಕಡಿತ ಮಾಡಲಾಗಿತ್ತು. ಮರಗಳ ರೆಂಬೆ–ಕೊಂಬೆಗಳು ಮುರಿದು ಬಿದ್ದಿವೆ. ಮಲ್ಕಪ್ನನಳ್ಳಿ, ಯರಗೋಳ, ಅಲ್ಲಿಪುರ, ವೆಂಕಟೇಶ ನಗರ, ವಡ್ನಳ್ಳಿ, ಕಂಚಗಾರಹಳ್ಳಿ, ಹತ್ತಿಕುಣಿ, ಬಾಚವಾರ, ಕೋಟಗೇರಾ, ಮಾಟ್ನಳ್ಳಿ, ಕಟ್ಟಿಗೆ ಶಹಾಪುರ, ಅರಿಕೇರಾ.ಬಿ, ಹೆಡಗಿಮದ್ರಾ, ಮುದ್ನಾಳ್, ಕಾನ್ನಳ್ಳಿ, ಠಾಣಗುಂದಿ, ಹೊನಗೇರಾ, ಬಂದಳ್ಳಿ, ಯಡ್ಡಳ್ಳಿ ಗ್ರಾಮಗಳಲ್ಲಿಯೂ ಮಳೆಯಾಗಿದೆ.
ಶುಕ್ರವಾರ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಕೊಳೆಚೆ ನೀರು ಸಂಗ್ರಹವಾಗಿದ್ದು, ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಸವಾರರಿಗೆ ತೊಂದರೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.