ADVERTISEMENT

ಪಡಿತರ ಅಕ್ರಮ ದಾಸ್ತಾನು: 250 ಕ್ವಿಂಟಲ್ ಜೋಳ, 2 ಕ್ವಿಂಟಲ್ ಹಾಲಿನ ಪುಡಿ ಪತ್ತೆ

ಗುರುಮಠಕಲ್‌: ಪಡಿತರ ಅಕ್ಕಿ ಅಕ್ರಮ ಪ್ರಕರಣ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 22:41 IST
Last Updated 16 ಅಕ್ಟೋಬರ್ 2025, 22:41 IST
   

ಯಾದಗಿರಿ: ಗುರುಮಠಕಲ್‌ನ ಅಕ್ಕಿ ಮಿಲ್‌ಗಳಲ್ಲಿ ₹1.21 ಕೋಟಿ ಮೌಲ್ಯದ 3,985 ಕ್ವಿಂಟಲ್‌ ಪಡಿತರ ಅಕ್ಕಿ ಅಕ್ರಮ ದಾಸ್ತಾನು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 250 ಕ್ವಿಂಟಲ್ ಪಡಿತರ ಜೋಳ ಹಾಗೂ ಕ್ಷೀರ ಭಾಗ್ಯದ 2 ಕ್ವಿಂಟಲ್‌ನಷ್ಟು ಹಾಲಿನ ಪುಡಿ ಪತ್ತೆಯಾಗಿದೆ.

ಪಡಿತರ ಅಕ್ಕಿ ಅಕ್ರಮ ದಾಸ್ತಾನು ಪತ್ತೆಯಾಗಿದ್ದ ಶ್ರೀಲಕ್ಷ್ಮಿ ವೆಂಕಟೇಶ್ವರ ರೈಸ್ ಮಿಲ್ ಹಾಗೂ ಶ್ರೀಲಕ್ಷ್ಮಿ ಬಾಲಾಜಿ ರೈಸ್ ಮಿಲ್‌ಗಳ ಮುಂಭಾಗದ ಲಕ್ಷ್ಮಿ ತಿಮ್ಮಪ್ಪ ಕಾಟನ್ ಮತ್ತು ಜಿನ್ನಿಂಗ್ ಮಿಲ್‌ನ ಗೋದಾಮಿನಲ್ಲೂ ಪಡಿತರ ಅಕ್ಕಿ ಅಕ್ರಮವಾಗಿ ದಾಸ್ತಾನು ಮಾಡಿದ್ದನ್ನು ಸಿಐಡಿ ಅಧಿಕಾರಿಗಳು‌ ಪತ್ತೆ ಮಾಡಿದ್ದರು. ಗೋದಾಮು‌ ಪರಿಶೀಲನೆ ವೇಳೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಜೋಳ ಮತ್ತು ಕ್ಷೀರ ಭಾಗ್ಯದ ಹಾಲಿನ ‌ಪುಡಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT