ADVERTISEMENT

ವಡೆಗೇರಾ: ಪ್ರಾಥಮಿಕ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿ ಫಲಿತಾಂಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 29 ಮೇ 2025, 14:30 IST
Last Updated 29 ಮೇ 2025, 14:30 IST

ವಡಗೇರಾ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆಡಳಿತ ಮಂಡಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ 5 ವರ್ಷದ ಅವಧಿಗೆ ಬೂದೆಪ್ಪ ಚಂದ್ರಾಯ, ಸಣ್ಣ ಮಲ್ಲಪ್ಪ ದ್ಯಾವಪ್ಪ, ಮಲ್ಲಣ್ಣ ಹಂಪಣ್ಣ, ಸಾಬಣ್ಣ ಮಲ್ಲಪ್ಪ, ಸಿದ್ದಪ್ಪ ದೇವಿಂದ್ರಪ್ಪ, ಮಲ್ಲಿಕಾರ್ಜುನರಡ್ಡಿ ಲಿಂಗನಗೌಡ, ಧಾಮಲ್ಯಾ ಧರ್ಮ ಅವರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ.  

ಯಂಕಪ್ಪ ತಿಪ್ಪಯ್ಯ, ಭೀಮಣ್ಣ ಮಲ್ಲಣ್ಣ ಜಡಿ, ಮರಿಲಿಂಗಪ್ಪ ಗೋಪಣ್ಣ, ಮಹದೇವಮ್ಮ ರಾಚಯ್ಯಸ್ವಾಮಿ, ಸೌಭಾಗ್ಯಮ್ಮ ಸಿದ್ದಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಸಾಲಗಾರರಲ್ಲದ ಮತದಾರರ ಸಂಖ್ಯೆ 325 ಇತ್ತು, ಅದರಲ್ಲಿ 129 ಮತಗಳು ಚಲಾವಣೆಯಾಗಿವೆ. ಸಾಲಗಾರರಲ್ಲದ 284 ಮತದಾರರಲ್ಲಿ 130 ಮತಗಳು ಚಲಾವಣೆಯಾಗಿದೆ. ಒಟ್ಟು 609 ಮತದಾರಲ್ಲಿ 259 ಮತದಾರರು ಹಕ್ಕು ಚಲಾಯಿಸಿದ್ದಾರೆ.

ADVERTISEMENT

ಗುರುವಾರ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 12 ಜನ ಕಣದಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.