ಚಿತ್ರ: ಎಐ
ಚುಮು ಚುಮು ಚಳಿಗೆ ಬೆಚ್ಚಗಿನ ಸೂಪ್ ಬೇಕು ಎಂದೆನಿಸುವುದು ಸಹಜ. ಮನೆಯಲ್ಲಿಯೇ ಸುಲಭವಾಗಿ ಮಸಾಲೆಯುಕ್ತ ಮಟನ್ ಪೆಪ್ಪರ್ ಸೂಪ್ ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.
ಬೇಕಾದ ಸಾಮಾಗ್ರಿಗಳು:
ಮಟನ್
ಈರುಳ್ಳಿ
ಟೊಮೆಟೊ
ಕರಿಮೆಣಸಿನ ಪುಡಿ
ಜೀರಿಗೆ
ಕೊತ್ತಂಬರಿ ಸೊಪ್ಪು
ಶುಂಠಿ
ಬೆಳ್ಳುಳ್ಳಿ
ಹಸಿರು ಮೆಣಸಿನಕಾಯಿಗಳು
ಅರಿಸಿನ ಪುಡಿ
ಮೆಣಸಿನ ಪುಡಿ
ತುಪ್ಪ
ಕರಿಬೇವು
ಉಪ್ಪು
ಮೊದಲು ಶುದ್ದವಾದ ನೀರಿನಲ್ಲಿ ಮಟನ್ ತುಂಡುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಒಂದು ಕಡೆ ಇಟ್ಟುಕೊಳ್ಳಿ. ಒಂದು ಬಾಣೆಲೆ ತೆಗೆದುಕೊಂಡು ಅದರಲ್ಲಿ ಕರಿಮೆಣಸು, ಜೀರಿಗೆ ಹಾಗೂ ಕೊತ್ತಂಬರಿ ಸೇರಿಸಿ ಬೆನ್ನಾಗಿ ಹುರಿದು ಪುಡಿಮಾಡಿಕೊಳ್ಳಿ.
ಕುಕ್ಕರ್‌ನಲ್ಲಿ ತುಪ್ಪ ಹಾಗೂ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಶುಂಠಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಬಳಿಕ ಈರುಳ್ಳಿ ಮತ್ತು ಟೊಮೆಟೊ ಸೇರಿಸಿ ಬೇಯಿಸಿಕೊಳ್ಳಿ.
ಮಟನ್ ತುಂಡುಗಳನ್ನು ಕುಕ್ಕರ್‌ಗೆ ಹಾಕಿ ಮಧ್ಯಮ ಹುರಿಯಲ್ಲಿ 5 ನಿಮಿಷಗಳ ಕಾಲ ಹುರಿಯಿರಿ. ಈ ಸಮಯದಲ್ಲಿ ಅರಿಸಿನ ಪುಡಿ, ಕೊತ್ತಂಬರಿ ಸೊಪ್ಪು, ಪುಡಿ ಮಾಡಿದ ಮೆಣಸಿನಕಾಯಿ ಮತ್ತು ಉಪ್ಪು ಸೇರಿಸಿ 2 ರಿಂದ 3 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
ಕುಕ್ಕರ್‌ನಲ್ಲಿ ಮಾಂಸ ಹಾಕಿ ಸಿದ್ದಪಡಿಸಿಕೊಂಡ ಎಲ್ಲಾ ಪದಾರ್ಥಗಳನ್ನು ಸೇರಿಸಿ, ಮಧ್ಯಮ ಉರಿಯಲ್ಲಿ 4 ರಿಂದ 5 ವಿಶಲ್ ಕೂಗಿಸಿ. ನಂತರ ಮುಚ್ಚಳವನ್ನು ತೆರೆದು ಟೀ ಸ್ಪೂನ್ ಮೆಣಸಿನ ಪುಡಿ, ತಾಜಾ ಕೊತ್ತಂಬರಿ ಸೊಪ್ಪು ಹಾಕಿ 2 ನಿಮಿಷಗಳ ಕಾಲ ಬಾಯಿ ಕುಕ್ಕರ್ ಬಾಯಿ ತೆರೆದು ಕುದಿಸಿದರೆ ಕಾರವಾದ ಮಟನ್ ಪೆಪ್ಪರ್ ಸೂಪ್ ಸಿದ್ಧವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.