ದಿನ ಭವಿಷ್ಯ: ತೀವ್ರ ಪ್ರತಿಸ್ಪರ್ಧಿಯನ್ನು ಭೇಟಿ ಮಾಡುವ ಅವಕಾಶ ಬರಲಿದೆ
ಶನಿವಾರ, 15 ನವೆಂಬರ್ 2025
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 14 ನವೆಂಬರ್ 2025, 19:30 IST
Last Updated 14 ನವೆಂಬರ್ 2025, 19:30 IST
ಮೇಷ
ಮನೆಯನ್ನು ಶುಚಿಗೊಳಿಸುವ ಕೆಲಸವನ್ನು ಮುಂದೆ ಹಾಕುವುದು ಸೂಕ್ತವಲ್ಲ. ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಸ್ವೀಕರಿಸುವ ಉತ್ತಮ ಅವಕಾಶಗಳು ಎದುರಾಗಲಿವೆ.
ವೃಷಭ
ನಿಮ್ಮದೇ ಕ್ಷೇತ್ರದಲ್ಲಿನ ಸವಾಲುಗಳನ್ನು ಇತರರಿಗಿಂತ ವಿಭಿನ್ನವಾಗಿ ಪರಿಣಿತರಾದ ನೀವು ಲೀಲಾಜಾಲವಾಗಿ ಎದುರಿಸುವಿರಿ. ಉತ್ಸಾಹದಿಂದ ಕೆಲಸ ಆರಂಭಿಸಿದಲ್ಲಿ ಸಮಸ್ಯೆಗಳು ಪರಿಹಾರಗೊಳ್ಳಲಿವೆ.
ಮಿಥುನ
ಮಿತ್ರರಿಂದ ಸಹಾಯ ಪಡೆಯುವುದು ಮಾತ್ರವಲ್ಲದೆ ಅವರ ಕಷ್ಟ ಕಾಲದಲ್ಲಿ ಸಹಾಯ ಮಾಡಲು ನೀವು ಸರ್ವಸನ್ನದ್ಧರಾಗಿ ಇರಬೇಕಾಗುತ್ತದೆ. ನಿಮ್ಮ ಮಾತುಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗುವುದು.
ಕರ್ಕಾಟಕ
ರೈತರಿಗೆ ಅದರಲ್ಲೂ ತೆಂಗಿನಕಾಯಿ ಬೆಳೆಗಾರರಿಗೆ ತಮ್ಮ ಬೆಳೆಗೆ ಅಧಿಕ ಬೆಲೆ ಕಂಡು ಬರುತ್ತದೆ. ಕುಟುಂಬದ ಹಿರಿಯರ ಆರೋಗ್ಯದ ವಿಷಯದಲ್ಲಿ ವಿಶೇಷ ಕಾಳಜಿವಹಿಸಿ. ಕಷ್ಟಗಳು ಎದುರಾಗಬಹುದು.
ಸಿಂಹ
ಸ್ವಂತ ಉದ್ಯೋಗಿಗಳಿಗೆ ವೃತ್ತಿಯಲ್ಲಿ ಲಾಭವಾಗುವುದು. ನೀವಾಗಿಯೇ ಅದರ ಫಲವನ್ನು ನಿರೀಕ್ಷಿಸಬೇಡಿ. ಉತ್ತಮ ಹಂತದಲ್ಲಿರುವ ಕಟ್ಟಡ ನಿರ್ಮಾಣವನ್ನು ಅನಿವಾರ್ಯ ಕಾರಣಗಳಿಂದ ನಿಲ್ಲಿಸುವಿರಿ.
ಕನ್ಯಾ
ಮಾರಣಾಂತಿಕವಾದ ಕಾಯಿಲೆಗಳಿಗೆ ಒಳಗಾಗುವಂಥ ಆಹಾರ ಪದಾರ್ಥಗಳು ಜೀವನಕ್ರಮದಲ್ಲಿ ಇದೆಯೇ ಎಂದು ಕಂಡುಕೊಳ್ಳಿರಿ. ವೃತ್ತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ದುಡುಕಬೇಡಿ.
ತುಲಾ
ಹಿಂದಿನ ದಿನದ ವಿಶೇಷ ಕಾರ್ಯಕ್ರಮದಲ್ಲಿ ಮಾಡಿದ ಭೋಜನವು ಅಡ್ಡಪರಿಣಾಮ ತೋರಿಸುವ ಸಾಧ್ಯತೆ ಇದೆ. ಕಾರ್ಯನಿಮಿತ್ತವಾಗಿ ಪ್ರಯಾಣ ಮಾಡಬಹುದು.
ವೃಶ್ಚಿಕ
ವೈಯಕ್ತಿಕ ಸಮಸ್ಯೆಗಳು ಏನೇ ಇದ್ದರೂ, ಮೊದಲ ಆದ್ಯತೆ ವೃತ್ತಿ ವಿಷಯಗಳಿಗೆ ಮಾತ್ರ ಇರಲಿ. ನೆರೆ-ಹೊರೆಯವರೊಂದಿಗಿನ ವ್ಯಾವಹಾರಿಕ ಸಂಬಂಧದಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ಭಿನ್ನಾಭಿಪ್ರಾಯ ಮೂಡಬಹುದು.
ಧನು
ಸ್ಥಾನಮಾನದಲ್ಲಿ ಬೇರೆಯವರು ಪಡುವ ಈರ್ಷ್ಯೆಯನ್ನು ಕಳೆದುಕೊಳ್ಳಲು ಉತ್ತಮವಾದ ಸನ್ನಿವೇಶ ಉಂಟಾಗುವುದು. ವ್ಯಾಪಾರ ಹಾಗೂ ವಾಣಿಜ್ಯದ ಸುಧಾರಣೆಗೆ ಸಾಕಷ್ಟು ಅಡೆತಡೆಗಳು ಒದಗಿ ಬರಲಿವೆ.
ಮಕರ
ಅಪೇಕ್ಷೆ ಪಟ್ಟಿದ್ದ ಹೊಸ ಉದ್ಯೋಗವನ್ನು ಸಂಪಾದಿಸುವಲ್ಲಿ ರಾಜಕೀಯ ವ್ಯಕ್ತಿಗಳ ಮೂಲಕ ಯಶಸ್ಸು ಗಳಿಸುವಿರಿ. ಗೃಹಸ್ಥಾಶ್ರಮದಲ್ಲಿ ವಿರಕ್ತತೆ ಅನ್ಯರಿಗೆ ಬೇಜವಾಬ್ದಾರಿ ಎಂದು ಅನ್ನಿಸಬಹುದು.
ಕುಂಭ
ಕೈಗೊಂಡ ಕೆಲಸಗಳು ಭಾಗಶಃ ಆರ್ಥಿಕ ದುಸ್ಥಿತಿಯಿಂದಾಗಿ ವಿಳಂಬವಾಗುವ ರೀತಿಯಲ್ಲಿ ಕಾಣಲಿವೆ. ಕೆಲಸಗಳನ್ನು ಸಾಧಿಸಿಕೊಳ್ಳಲೇ ಬೇಕಿದ್ದರೆ ಅವಿರತ ಶ್ರಮ ಅಗತ್ಯ ಮತ್ತು ಅನಿವಾರ್ಯ.
ಮೀನ
ಮನರಂಜನೆಗಾಗಿ ತಮಾಷೆಯ ಮಾತುಗಳನ್ನಾಡುವಾಗ ಗುಪ್ತವಾದ ಸಂಗತಿಗಳು ಬಯಲಾಗಬಹುದು. ತೀವ್ರ ಪ್ರತಿಸ್ಪರ್ಧಿಯನ್ನು ಭೇಟಿ ಮಾಡುವ ಅವಕಾಶ ಬರಲಿದೆ. ಜಿಜ್ಞಾಸಿಗಳಿಗೆ ಸಹಪಟು ಸಿಗುತ್ತಾರೆ.