ADVERTISEMENT

ದಿನ ಭವಿಷ್ಯ: ಈ ರಾಶಿಯವರು ಪ್ರಯತ್ನ ಬಲದಿಂದ ಕಾರ್ಯದಲ್ಲಿ ಮುನ್ನುಗ್ಗಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 7 ಆಗಸ್ಟ್ 2025, 21:19 IST
Last Updated 7 ಆಗಸ್ಟ್ 2025, 21:19 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಪೊಲೀಸ್‌ ವೃತ್ತಿಯಲ್ಲಿರುವವರು ಕಾರ್ಯಾಚರಣೆಗಾಗಿ ದೂರ ಸಂಚಾರ ಮಾಡಲಿದ್ದೀರಿ . ಪ್ರಯತ್ನ ಬಲದಿಂದ ಕಾರ್ಯದಲ್ಲಿ ಮುನ್ನುಗ್ಗಿ. ಗುಮಾಸ್ತ ಕೆಲಸದಲ್ಲಿದ್ದವರಿಗೆ ವಿರಾಮ ಸಿಗುವಂತಾಗಲಿದೆ.
  • ವೃಷಭ
  • ವಿದ್ಯಾಭ್ಯಾಸದ ಬಗ್ಗೆ ಚಿಂತನೆ ನಡೆಯುವುದು. ವಿರೋಧಿಗಳ ಅಥವಾ ಸಂಬಂಧಿಕರ ಟೀಕೆಗಳಿಗೆ ಕಿವಿಯೊಡ್ಡಿದರೆ, ಕೇವಲ ಸಮಯ ಹಾಳಾಗುವುದು ಎಂಬುದು ತಿಳಿದಿರಲಿ. ತರಕಾರಿ ಮಾರಾಟಗಾರರಿಗೆ ಸುದಿನ.
  • ಮಿಥುನ
  • ಆಪ್ತರಿಂದ ಬರುವ ಸಲಹೆ–ಸೂಚನೆಗಳಿಗೆ ಗಮನ ನೀಡಿ ಪ್ರಯತ್ನದಿಂದ ಕೆಲಸದಲ್ಲಿ ಮುನ್ನುಗ್ಗಿ. ಹೊಸಜೀವನ ಪ್ರಾರಂಭವಾಗುವುದರಿಂದ ದೇವತಾ ಕಾರ್ಯಗಳನ್ನು ಜರುಗಿಸುವ ಬಗ್ಗೆ ಯೋಚಿಸಿ.
  • ಕರ್ಕಾಟಕ
  • ತಾಯಿಗೆ ನುರಿತ ವೈದ್ಯರಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಲು ವೈದ್ಯರ ಸಂಪರ್ಕ ಮತ್ತು ಸಹಾಯ ಹಸ್ತ ಸಿಗುವುದು. ಉದ್ಯೋಗ ಬದಲಾವಣೆ ವಿಚಾರದಲ್ಲಿದ್ದ ಗೊಂದಲ ನಿವಾರಿಸಿಕೊಳ್ಳುವಿರಿ. ಪಂಚಾಕ್ಷರಿ ಮಂತ್ರ ಜಪಿಸಿ.
  • ಸಿಂಹ
  • ವ್ಯಾಪಾರ ಸಂಬಂಧ ಬ್ಯಾಂಕ್ ಅಧಿಕಾರಿಗಳ ಜೊತೆ ತಕ್ಷಣದಲ್ಲಿ ಮಾತುಕತೆ ನಡೆಸಬೇಕಾದೀತು. ರಾಜಕೀಯ ವ್ಯಕ್ತಿಗಳು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೀರಿ. ರಾಜಕೀಯ ವಿದ್ಯಮಾನ ಎಚ್ಚರಿಕೆಯಿಂದ ಗಮನಿಸಿರಿ.
  • ಕನ್ಯಾ
  • ಸಂಸಾರ ನಿರ್ವಹಣೆ ಸಲಭವೆನಿಸುವುದಿಲ್ಲ. ಕೆಲಸಗಳನ್ನು ಸಾಧಿಸಿಕೊಳ್ಳಲೇ ಬೇಕಿದ್ದರೆ ಅವಿರತ ಶ್ರಮ ಅಗತ್ಯ, ಅನಿವಾರ್ಯ. ಹಿತಾಸಕ್ತಿಗಳಿಗೆ ಹೆಚ್ಚು ಗಮನ ಕೊಡಿ. ಮಕ್ಕಳ ಅಗತ್ಯಗಳನ್ನು ಪೂರೈಸಿ.
  • ತುಲಾ
  • ಕುಟುಂಬದ ಗೌರವಕ್ಕೆ ಚ್ಯುತಿ ಬಾರದಂತೆ ಕಾಪಾಡಿಕೊಳ್ಳುವುದರ ಬಗ್ಗೆ ನಿಮ್ಮನಡೆ ಇರಲಿ. ಆತ್ಮಾಭಿಮಾನವನ್ನು ಸಂರಕ್ಷಿಸಿಕೊಳ್ಳಿ. ಆಧ್ಯಾತ್ಮಿಕ ಚಿಂತನೆಯು ಜೀವನದ ಧೈರ್ಯವನ್ನು ವೃದ್ಧಿಸುತ್ತದೆ.
  • ವೃಶ್ಚಿಕ
  • ಹಣಕಾಸಿನ ವಿಚಾರದಲ್ಲಿ ಭವಿಷ್ಯದ ಕುರಿತು ಯೋಚಿಸಿ ನಿರ್ಧಾರ ಕೈಗೊಳ್ಳುವುದರಿಂದ ಮುಂದಿನ ದಿನಗಳು ನೆಮ್ಮದಿದಾಯಕವಾಗಲಿವೆ. ಸಂಜೆಯ ಸಮಯದ ಪುಟ್ಟದೊಂದು ಪ್ರಯಾಣ ಹುರುಪು ತುಂಬಲಿದೆ.
  • ಧನು
  • ಕೋಪದ ಮೇಲೆ ನಿಯಂತ್ರಣವನ್ನು ಸಾಧಿಸದಿದ್ದರೆ ಸಹೋದರರು ಮತ್ತು ಸ್ನೇಹಿತರು ಎದುರಾಳಿಗಳಾಗುವರು. ಸಾಧ್ಯವಾದ ಮಟ್ಟಿಗೆ ಶಾಂತವಾಗಿರಿ. ತೋಟದ ಬೆಳೆಗಳಿಂದ ಉತ್ತಮ ಆದಾಯವಿರುವುದು.
  • ಮಕರ
  • ಕೆಲಸಗಳ ಬಗ್ಗೆ ಪುನರವಲೋಕನ ಮಾಡಿ. ಬಂಧು ಮಿತ್ರರೊಂದಿಗೆ ಸಂತೋಷ ಹಂಚಿಕೊಳ್ಳುವಿರಿ. ಮನೆ ಕೊಳ್ಳುವ ವಿಷಯ ಇತ್ಯರ್ಥವಾಗುವುದು. ಹಳದಿ ವರ್ಣ ಶುಭದಾಯಕ.
  • ಕುಂಭ
  • ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರುವುದು. ಹಳೆಯ ವಾಹನವನ್ನು ಕೊಟ್ಟು ಹೊಸ ವಾಹನ ಖರೀದಿ ಮಾಡುವ ಯೋಚನೆಗೆ ಜೀವ ಬಂದಂತೆ ಆಗುವುದು. ಮಗನ ಕಾರ್ಯಸಿದ್ಧಿಗೆ ಗಣೇಶನಿಗೆ ಪೂಜೆ ಮಾಡಿಸಿ.
  • ಮೀನ
  • ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ ನಿಮಗೆ ಬಂದಿದೆ. ಆದರೂ ಮುನ್ನೆಚ್ಚರಿಕೆ ಅಗತ್ಯ. ಆಡಿಟಿಂಗ್ ಕೆಲಸಗಳಿಂದ ವರಮಾನ ಗಳಿಸುವಿರಿ. ಹಣದ ವಿಚಾರದಲ್ಲಿ ಮಿತವ್ಯಯಿಗಳಾಗಿರಿ. ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.