ದಿನ ಭವಿಷ್ಯ: ಜೂನ್ 17 ಮಂಗಳವಾರ 2025– ಪುಣ್ಯಕ್ಷೇತ್ರಗಳ ದರ್ಶನವನ್ನು ಮಾಡಿರಿ
ದಿನ ಭವಿಷ್ಯ: ಜೂನ್ 17 ಸೋಮವಾರ 2025
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 16 ಜೂನ್ 2025, 18:31 IST
Last Updated 16 ಜೂನ್ 2025, 18:31 IST
ದಿನ ಭವಿಷ್ಯ
ಮೇಷ
ಹಿರಿಯರ ಜೀವನಾನುಭವ ಸಲಹೆಗಳನ್ನು ತಿಳಿದುಕೊಂಡು ಎದುರಾದ ಸಮಸ್ಯೆಗೆ ಪರಿಹಾರವನ್ನು ತೆಗೆದುಕೊಳ್ಳಿರಿ. ಷೇರು ಮಾರಾಟದಿಂದ ಲಾಭ . ಶನೈಶ್ಚರನ ಸ್ತೋತ್ರ ಪಠಿಸುವುದರಿಂದ ಒಳಿತಾಗುತ್ತದೆ.
ವೃಷಭ
ಲಾಭ-ನಷ್ಟಗಳ ಬಗ್ಗೆ ಪುನರವಲೋಕನ ಅಗತ್ಯ. ವಿದೇಶಿ ಬಂಡವಾಳಗಳಿಂದ ಲಾಭ ಗಳಿಸುವ ಅವಕಾಶ ಸಿಗಲಿದೆ. ಹಣಕ್ಕೆ ಇರುವ ಅಡಚಣೆಗಳನ್ನು ನಿವಾರಿಸಿಕೊಳ್ಳುವ ಬಗ್ಗೆ ಮಾರ್ಗದರ್ಶಕರನ್ನು ಭೇಟಿ ಮಾಡಿ.
ಮಿಥುನ
ಬೇಜವಾಬ್ದಾರಿತನ, ಕರ್ತವ್ಯ ಕೊರತೆಯಿಂದಾಗಿ ಉಲ್ಲಾಸವನ್ನು ಕಳೆದುಕೊಳ್ಳುವ ಸಮಯ ಎದುರಾಗಲಿದೆ. ಮಾನಸಿಕ ನೆಮ್ಮದಿಗಾಗಿ ಧಾರ್ಮಿಕ ಕಾರ್ಯಗಳನ್ನು ಮಾಡಿ ಅಥವಾ ಪುಣ್ಯಕ್ಷೇತ್ರಗಳ ದರ್ಶನವನ್ನು ಮಾಡಿರಿ.
ಕರ್ಕಾಟಕ
ಹೊಸ ಆಸೆಗಳನ್ನು ಈಡೇರಿಸಿಕೊಳ್ಳುವಂಥ ಉತ್ತಮ ಅವಕಾಶಗಳು ಎದುರಾಗಲಿವೆ. ಹೊಸ ವ್ಯವಹಾರಗಳ ಚಾಲನೆಗೆಂದು ಉತ್ತಮ ಮಾರ್ಗದರ್ಶನವನ್ನು ಹೊಂದುವಿರಿ. ಬಿಳಿ ಬಣ್ಣ ಶುಭಪ್ರದವಾಗಿರುತ್ತದೆ.
ಸಿಂಹ
ಗಂಡ-ಹೆಂಡತಿಯ ಮಧ್ಯದಲ್ಲಿ ಅನಗತ್ಯ ವಾದಗಳು ಬೇಡ. ಇಲಾಖೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಬಡ್ತಿ ದೊರೆಯುವ ಸಂಭವವಿದೆ. ಗೃಹಿಣಿಯರು ಉತ್ತಮ ಹೊಗಳಿಕೆಯ ಮಾತುಗಳನ್ನು ಎದುರು ನೋಡಬಹುದು.
ಕನ್ಯಾ
ಹೋಟೆಲ್ ಉದ್ಯಮ ನಡೆಸುವವರು ಅಥವಾ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರು ಸಂಯಮದಿಂದ ನಡೆದುಕೊಳ್ಳುವುದು ಲಾಭ ತಂದುಕೊಡುತ್ತದೆ. ದಿನನಿತ್ಯದ ಹಣಕಾಸಿನ ಕೊರತೆ ಇರುವುದಿಲ್ಲ.
ತುಲಾ
ಅಧಿಕಾರಿ ವರ್ಗದವರಿಗೆ ಸ್ಥಳ ಬದಲಾವಣೆ ಸಂಭವವಿದೆ. ಕೃಷಿ ಕೆಲಸಗಳಿಗೆ ಪರಿಶ್ರಮ ಅಗತ್ಯ. ಘನತೆ –ಗೌರವದ ವಿಚಾರವಾಗಿ ಸ್ಥಾನದ ಅರಿವು ನಿಮಗಾಗುವುದು. ವೃತ್ತಿಪರ ಕೆಲಸಗಳ ಬಗ್ಗೆ ತಿಳಿದುಕೊಳ್ಳುವಿರಿ.
ವೃಶ್ಚಿಕ
ವೈದ್ಯ ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಪ್ರಗತಿ ಕಂಡುಬರಲಿದೆ. ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ತೆರಳಲು ಬೇಕಾದ ಪೂರ್ವತಯಾರಿ ಮಾಡಿಕೊಳ್ಳುವಿರಿ. ಇನ್ನೊಬ್ಬರಿಂದ ಹೀಯಾಳಿಕೆಯ ಮಾತನ್ನು ಕೇಳಬೇಕಾಗಬಹುದು.
ಧನು
ಜವಳಿ ವ್ಯಾಪಾರಿಗಳು ವಿಶೇಷ ರಿಯಾಯಿತಿ ಮಾರಾಟಗಳಿಂದ ಲಾಭ ಪಡೆಯುವಿರಿ. ಮಿತ್ರರೊಂದಿಗೆ ಮಾತುಕತೆಗಳಲ್ಲಿ ಕಾಲ ಕಳೆಯುವಂತಾಗಲಿದೆ. ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳಬೇಕಾದ ಅಗತ್ಯವಿದೆ.
ಮಕರ
ಕೈಗೊಂಡ ಕೆಲಸಗಳು ಭಾಗಶಃ ಆರ್ಥಿಕ ದುಸ್ಥಿತಿಯಿಂದ ಹಿನ್ನಡೆ ಕಾಣಲಿವೆ. ವೃತ್ತಿರಂಗದಲ್ಲಿ ಅನಿವಾರ್ಯವಾಗಿ ಮೋಸ ಮಾಡಬೇಕಾದ ಸಂದರ್ಭಗಳು ಎದುರಾಗುವುದು.
ಕುಂಭ
ಶುಭ ಸಮಾಚಾರಗಳನ್ನು ಕೇಳುವುದಲ್ಲದೆ ಪ್ರಯತ್ನಿಸಿದ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಪಡೆಯುವಿರಿ. ಮನೆಯಲ್ಲಿ ಸಂತಸದ ವಾತಾವರಣ ಸೃಷ್ಟಿಯಾಗಲಿದೆ. ಮಾನಸಿಕ ಪೀಡೆಗಳಿಗೆ ಒಳಗಾಗದಂತೆ ಕಾಳಜಿ ವಹಿಸಿ.
ಮೀನ
ಐ.ಟಿ. ಕಂಪನಿ ಉದ್ಯೋಗಿಗಳಿಗೆ ಕೆಲಸದ ಒತ್ತಡ ಜಾಸ್ತಿಯಾಗಲಿದೆ. ಅದರ ಪರಿಣಾಮವಾಗಿ ವರಮಾನ ಹೆಚ್ಚಳದ ಸಂಭವವು ಇರುವುದು. ನವದಂಪತಿಗೆ ಹರ್ಷದ ಸಮಾಚಾರ ಕೇಳಿ ಬರಲಿದೆ.