ADVERTISEMENT

ದಿನ ಭವಿಷ್ಯ: ಜೂನ್ 19 ಗುರುವಾರ 2025- ದೂರದ ಪ್ರಯಾಣ ಮಾಡುವ ಸಾಧ್ಯತೆಗಳಿವೆ

ದಿನ ಭವಿಷ್ಯ: ಜೂನ್ 19 ಗುರುವಾರ 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 18 ಜೂನ್ 2025, 18:31 IST
Last Updated 18 ಜೂನ್ 2025, 18:31 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ರಾಜಕೀಯದಲ್ಲಿ ಯಾವುದೇ ರೀತಿಯ ಬದಲಾವಣೆ ಸರಿಯಲ್ಲ. ಗೃಹದಲ್ಲಿ ಶುಭ, ಮಂಗಳ ಕಾರ್ಯಗಳ ಚಟುವಟಿಕೆಗಳು ತೋರಿ ಬರುವವು. ದಿನದ ಖರ್ಚು ವೆಚ್ಚಗಳು ಹೆಚ್ಚಿರಲಿವೆ.
  • ವೃಷಭ
  • ಹೆಸರಾಂತ ವ್ಯಕ್ತಿಗಳನ್ನು ಭೇಟಿ ಮಾಡುವ ಅವಶ್ಯಕತೆ ಇದ್ದಲ್ಲಿ ಫಲಿಸುವ ಸಾಧ್ಯತೆಗಳಿವೆ. ಚಿನ್ನ–ಬೆಳ್ಳಿ ಮಾರಾಟಗಾರರಿಗೆ ಹೆಚ್ಚಿನ ಲಾಭ ಇರುತ್ತದೆ. ಲಲಿತಕಲಾ ಕ್ಷೇತ್ರದಲ್ಲಿರುವವರಿಗೆ ಸಾಧನೆಗೆ ಅವಕಾಶವಿದೆ.
  • ಮಿಥುನ
  • ಬ್ಯಾಂಕ್ ಮತ್ತು ನ್ಯಾಯಾಂಗ ಕ್ಷೇತ್ರದಲ್ಲಿರುವ ವ್ಯಕ್ತಿಗಳಿಗೆ ಚಾಣಾಕ್ಷತನದಿಂದ ಹೆಗ್ಗಳಿಕೆಗೆ ಪಾತ್ರರಾಗುತ್ತೀರಿ. ಅನಿರೀಕ್ಷಿತ ದೂರದ ಪ್ರಯಾಣ ಮಾಡುವ ಸಾಧ್ಯತೆಗಳಿವೆ.
  • ಕರ್ಕಾಟಕ
  • ಮೇಲಧಿಕಾರಿಗಳೊಂದಿಗೆ ಹೊಸ ಯೋಜನೆ ಕುರಿತು ಗಹನವಾದ ಚರ್ಚೆ ನಡೆಯುವ ಸಾಧ್ಯತೆಗಳಿವೆ. ಚರ್ಚೆ ನಿಮಗೆ ಅನುಕೂಲವಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪರಿಶ್ರಮದಿಂದ ಉತ್ತಮ ಫಲ ಕಾಣುವಿರಿ.
  • ಸಿಂಹ
  • ಸರಕು ಸಾಗಾಣೆದಾರರಿಗೆ ಆದಾಯದಲ್ಲಿ ಹೆಚ್ಚಳ ಕಂಡುಬಂದರೂ, ಕಾರ್ಯದ ಒತ್ತಡದಿಂದ ವೃತ್ತಿಯಲ್ಲಿ ನಿರಾಶೆಯಾಗುವುದು. ಬೃಹತ್ ವಾಹನವನ್ನು ಖರೀದಿಸುವವರಿಗೆ ಇದು ಸೂಕ್ತ ಸಮಯವವಲ್ಲ.
  • ಕನ್ಯಾ
  • ಮನೆಗೆ ಬರುವ ವ್ಯಕ್ತಿಯೊಂದಿಗೆ ನೂತನ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುವಿರಿ. ಮಾಡಿದ ಪಾಪದ ಫಲ ಅನುಭವಕ್ಕೆ ಬರಲಿದೆ. ಸರಿ–ತಪ್ಪುಗಳ ಅರಿವಿಲ್ಲದೆ ಪ್ರಶ್ನಿಸಿಕೊಳ್ಳುವ ಸಮಯ ಎದುರಾಗುವುದು.
  • ತುಲಾ
  • ಜನರ ಜತೆ ನಗು-ನಗುತ್ತಾ ಬೆರೆಯುವ ವರ್ತನೆಯಿಂದ ಪ್ರೀತಿ ಗಳಿಸುವಿರಿ. ಬೋಧಕರು ವರ್ಗಾವಣೆಗಾಗಿ ಮಾಡಿದ ಭಾರಿ ಪ್ರಯತ್ನ ವ್ಯರ್ಥವಾಗುವ ಸಂಭವವಿದೆ.
  • ವೃಶ್ಚಿಕ
  • ವೃತ್ತಿಯಲ್ಲಿ ಬೇಜವಾಬ್ದಾರಿತನ ತೋರಿದರೆ ಕೆಲಸಕ್ಕೆ ಪೂರ್ಣವಿರಾಮ ಸಿಗಬಹುದು. ಕೆಲಸದಲ್ಲಿ ಗಮನ ಮತ್ತು ಹೆಚ್ಚಿನ ಜವಾಬ್ದಾರಿ ಇರಲಿ. ಅಪರೂಪದ ತಿಂಡಿ ತಿನಿಸುಗಳು ಪ್ರಾಪ್ತಿಯಾಗಲಿವೆ.
  • ಧನು
  • ಸ್ಪಷ್ಟ ನಿರ್ಧಾರವನ್ನು ಮಾಡಿದ ವಿಚಾರವನ್ನು ಪುನಃ ಮತ್ತೊಮ್ಮೆ ಯೋಚಿಸಲು ಅವಕಾಶಗಳು ಒದಗಿಬರುತ್ತವೆ. ಬದಲಾವಣೆಯ ಅವಶ್ಯಕತೆ ಇರುವುದಿಲ್ಲ. ಪಶ್ಚತ್ತಾ‍ಪ ಪಡುವಂಥ ತಪ್ಪುಗಳು ನಡೆಯಲಿವೆ.
  • ಮಕರ
  • ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಅವಕಾಶಗಳನ್ನು ಉಪಯೋಗಿಸಿಕೊಳ್ಳಿರಿ. ಯಶಸ್ಸಿನ ಹೊಸ ಮಾರ್ಗಗಳ ಅರಿವಾಗುವುದು. ಸ್ವಪ್ರಯತ್ನದೊಂದಿಗೆ ದೈವ ಬಲವೂ ಇರುತ್ತದೆ.
  • ಕುಂಭ
  • ನೌಕರಿಯ ಅಥವಾ ಸಂಪಾದನೆಯ ಯೋಚನೆಯನ್ನು ಬಿಟ್ಟು ಉನ್ನತ ಓದಿನೆಡೆಗೆ ಗಮನ ನೀಡುವುದು ಉತ್ತಮ. ಅವಿವಾಹಿತರಿಗೆ ಕಂಕಣ ಬಲದ ಯೋಗವಿದ್ದು ಮಾತುಕತೆಯಿಂದ ದಿನ ನಿಗದಿಯಾಗುವುದು.
  • ಮೀನ
  • ವಿದೇಶದಲ್ಲಿ ನೆಲೆಸಿರುವವರಿಗೆ ಸ್ವಸ್ಥಾನದಲ್ಲಿ ಇರುವಂಥ ಪೋಷಕರ ಬಗ್ಗೆ ತಲೆಬಿಸಿಯಾಗುತ್ತದೆ. ಗೃಹ ವಿನ್ಯಾಸಗಾರರಿಗೆ ಹಾಗೂ ಒಳಾಂಗಣ ವಿನ್ಯಾಸಗಾರರಿಗೆ ಅವಕಾಶಗಳು ದೊರೆಯಲಿವೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.