
ನವದೆಹಲಿ: ದೇಶದಾದ್ಯಂತ 11 ನದಿಗಳ ನೀರಿನ ಪ್ರಮಾಣವು ಎಚ್ಚರಿಕೆ ಮಟ್ಟ ಮೀರಿದೆ. ಆದರೆ, ಅವು ಅಪಾಯದ ಅಥವಾ ತೀವ್ರ ಪ್ರವಾಹದ ಮಟ್ಟ ತಲುಪಿಲ್ಲ ಎಂದು ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಬುಧವಾರ ತಿಳಿಸಿದೆ.
ಕೇಂದ್ರ ಪ್ರವಾಹ ನಿಯಂತ್ರಣ ಕೊಠಡಿಯ ದೈನಂದಿನ ಬುಲೆಟಿನ್, ಈ ಕುರಿತು ಮಾಹಿತಿಯನ್ನು ಬಿಡುಗಡೆ ಮಾಡಿದೆ.
ಪ್ರಸ್ತುತ ಅಸ್ಸಾಂ, ಬಿಹಾರ, ಒಡಿಶಾ, ತಮಿಳುನಾಡು ಮತ್ತು ಉತ್ತರಪ್ರದೇಶ ಸೇರಿದಂತೆ 12 ಸ್ಥಳಗಳಲ್ಲಿ ನೀರಿನ ಪ್ರಮಾಣವು ಎಚ್ಚರಿಕೆ ಮಟ್ಟ ತಲುಪಿವೆ. ಆದರೆ, ಯಾವುದೇ ಪ್ರದೇಶವು ಅಪಾಯದ ಮಟ್ಟಕ್ಕೇರಿಲ್ಲ ಎಂದು ಅದು ತಿಳಿಸಿದೆ.
ಆಂಧ್ರಪ್ರದೇಶ, ಜಾರ್ಖಂಡ್, ಕರ್ನಾಟಕ, ಒಡಿಶಾ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 10 ರಾಜ್ಯಗಳಲ್ಲಿ ಜಲಾಶಯ ಮತ್ತು ಬ್ಯಾರೇಜ್‌ಗಳ 23 ಸ್ಥಳಗಳಲ್ಲಿ ಒಳಹರಿವಿನ ಮಟ್ಟ ಹೆಚ್ಚುವ ಮುನ್ಸೂಚನೆಯನ್ನು ಸಿಡಬ್ಲ್ಯೂಸಿ ನೀಡಿದೆ.
ಆಲಮಟ್ಟಿ, ನಾರಾಯಣಪುರ, ತುಂಗಭದ್ರಾ ಸೇರಿದಂತೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಒಳ ಹರಿವಿನ ಮಟ್ಟ ಹೆಚ್ಚಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.