
ರತನ್ ಟಾಟಾ, ಡೊನಾಲ್ಡ್ ಟ್ರಂಪ್
ಹೈದರಾಬಾದ್: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ರಾವಿರ‍್ಯಾಲ್‌ದಲ್ಲಿರುವ ನೆಹರೂ ಹೊರವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಸ್ತಾವಿತ ರೇಡಿಯಲ್ ಹೊರವರ್ತುಲ ರಸ್ತೆ (ಆರ್‌ಆರ್‌ಆರ್)ಗೆ ಪದ್ಮಭೂಷಣ ರತನ್ ಟಾಟಾ ಹೆಸರಿಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ರಾವಿರ‍್ಯಾಲ್‌ದಲ್ಲಿರುವ ಇಂಟರ್‌ಚೇಂಜ್‌ಗೆ ‘ಟಾಟಾ ಇಂಟರ್‌ಚೇಂಜ್’ ಎಂದು ಈಗಾಗಲೇ ನಾಮಕರಣ ಮಾಡಲಾಗಿದೆ.
ಹೈದರಾಬಾದ್‌ನ (ಫೈನಾನ್ಸಿಯಲ್ ಡಿಸ್ಟ್ರಿಕ್ಟ್) ನಾನಕ್‌ರಾಮಗೂಡದಲ್ಲಿರುವ ಅಮೆರಿಕ ಕಾನ್ಸುಲೆಟ್ ಜನರಲ್ ಕಟ್ಟಡವಿರುವ ರಸ್ತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರಿಡಲು ಪ್ರಸ್ತಾಪ ಸಿದ್ಧಪಡಿಸಿದೆ. ಈ ಸಂಬಂಧ ಕೇಂದ್ರ ವಿದೇಶಾಂಗ ಸಚಿವಾಲಯ ಹಾಗೂ ಅಮೆರಿಕ ರಾಯಭಾರ ಕಚೇರಿಗೆ ತೆಲಂಗಾಣ ಸರ್ಕಾರ ಪತ್ರ ಬರೆದಿದೆ.
ನವದೆಹಲಿಯಲ್ಲಿ ಭಾರತ–ಅಮೆರಿಕ ಕಾರ್ಯತಂತ್ರದ ಪಾಲುದಾರಿಗೆ ವಾರ್ಷಿಕ ಸಭೆ ಉದ್ದೇಶಿಸಿ ಮಾತನಾಡಿದ್ದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಹೈದರಾಬಾದ್ ನಗರದ ಪ್ರಮುಖ ರಸ್ತೆಗಳಿಗೆ ಗಣ್ಯವಕ್ತಿ, ಪ್ರಮುಖ ಕಂಪನಿಗಳ ಹೆಸರಿಡುವ ಪ್ರಸ್ತಾಪವಿದೆ ಎಂದು ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.