ADVERTISEMENT

ಆರ್‌ಎಸ್‌ಎಸ್‌ ಮೆರವಣಿಗೆಗೆ ತಡೆ ಕೋರಿ ನ್ಯಾಯಾಲಯಕ್ಕೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 15:21 IST
Last Updated 26 ಸೆಪ್ಟೆಂಬರ್ 2022, 15:21 IST
ಮದ್ರಾಸ್‌ ಹೈಕೋರ್ಟ್‌ 
ಮದ್ರಾಸ್‌ ಹೈಕೋರ್ಟ್‌    

ಚೆನ್ನೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್‌ಎಸ್‌ಎಸ್‌) ತನ್ನ ಸಂಸ್ಥಾಪನಾ ದಿನದ ಅಂಗವಾಗಿ ಅಕ್ಟೋಬರ್‌ 2ರಂದು ತಮಿಳುನಾಡಿನ 50 ಸ್ಥಳಗಳಲ್ಲಿ ಮೆರವಣಿಗೆ ನಡೆಸಲು ನಿರ್ಧರಿಸಿದ್ದು, ಇದಕ್ಕೆ ತಡೆ ನೀಡುವಂತೆ ಕೋರಿ ಆಡಳಿತಾರೂಢ ಡಿಎಂಕೆಯ ಮಿತ್ರಪಕ್ಷ ವಿದುತಲೈ ಚಿರುತೈಗಳ್‌ ಕಚ್ಚಿ (ವಿಕೆಸಿ) ಮದ್ರಾಸ್‌ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದೆ.

‘ಶಾಂತಿ ಹಾಗೂ ಸೌಹಾರ್ದತೆಯ ನೆಲೆಯಾಗಿರುವ ತಮಿಳುನಾಡಿನಲ್ಲಿ ಆರ್‌ಎಸ್‌ಎಸ್‌ ದ್ವೇಷ ಹರಡಲು ಮುಂದಾಗಿದೆ. ಗಾಂಧಿ ಜಯಂತಿ ದಿನವೇ ಮೆರವಣಿಗೆ ನಡೆಸಲು ನಿರ್ಧರಿಸಿದೆ. ಅದಕ್ಕೆ ಅವಕಾಶ ನೀಡಬಾರದೆಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇವೆ’ ಎಂದು ವಿಕೆಸಿ ಮುಖ್ಯಸ್ಥ ತೋಳ್‌ ತಿರುಮಾವಳವನ್‌ ಹೇಳಿದ್ದಾರೆ.

ಮೆರವಣಿಗೆಗೆ ಅನುಮತಿ ನೀಡಲು ಪೊಲೀಸರು ನಿರಾಕರಿಸಿದ್ದರು. ಇದನ್ನು ಆರ್‌ಎಸ್‌ಎಸ್‌, ಮದ್ರಾಸ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು ಸೆಪ್ಟೆಂಬರ್‌ 28ರೊಳಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ತಡೆ ನೀಡುವಂತೆ ಕೋರಿ ಮೇಲ್ಮನವಿ ಸಲ್ಲಿಸುವಂತೆ ಮಿತ್ರಪಕ್ಷಗಳು ಡಿಎಂಕೆ ಮೇಲೆ ಒತ್ತಡ ಹೇರಿವೆ ಎನ್ನಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.