
ಪಿಟಿಐ
ಶಬರಿಮಲೆ
(ಪಿಟಿಐ ಚಿತ್ರ)
ಪತ್ತನಂತಿಟ್ಟ: ‘ಶಬರಿಮಲೆ ದೇವಸ್ಥಾನದ ಚಿನ್ನ ಲೇಪಿತ ತಾಮ್ರದ ದ್ವಾರಪಾಲಕರ ಮೂರ್ತಿಗಳಲ್ಲಿನ ಚಿನ್ನದ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಮತ್ತು ಗರ್ಭಗುಡಿಯ ದ್ವಾರದಲ್ಲಿನ ಚಿನ್ನ ಕಳವಿನ ಪ್ರಕರಣದ ಕುರಿತು ಜಾಗರೂಕನಾಗಿರುತ್ತೇನೆ’ ಎಂದು ದೇವಸ್ಥಾನಕ್ಕೆ ಆಯ್ಕೆಯಾಗಿರುವ ನೂತನ ಅರ್ಚಕ ಪ್ರಸಾದ್ ಇ.ಡಿ. ಶನಿವಾರ ಹೇಳಿದರು.
ತ್ರಿಶ್ಶೂರಿನ ಪ್ರಸಾದ್ ಅವರನ್ನು ಶಬರಿಮಲೆ ದೇವಸ್ಥಾನಕ್ಕೆ ಮತ್ತು ಕೊಲ್ಲಂನ ಮನು ನಂಬೂದರಿ ಎಂ.ಜಿ ಅವರನ್ನು ಮಲ್ಲಿಕಾಪುರ ದೇವಸ್ಥಾನಕ್ಕೆ ಸಾಂಪ್ರದಾಯಿಕ ಪದ್ಧತಿಯಲ್ಲಿ ಅರ್ಚಕರನ್ನಾಗಿ ಆಯ್ಕೆ ಮಾಡಲಾಯಿತು. ಈ ಬಳಿಕ ಮಾತನಾಡಿದ ಪ್ರಸಾದ್, ‘ಅಯ್ಯಪ್ಪನಿಗೆ ಎಲ್ಲವೂ ತಿಳಿದಿದೆ. ಅವನೇ ಈ ಸಮಸ್ಯೆಗೆ ಪರಿಹಾರವನ್ನೂ ನೀಡುತ್ತಾನೆ. ಈ ಪ್ರಕರಣದಿಂದ ಶಬರಿಮಲೆಗೆ ಬರುವ ಭಕ್ತರ ಸಂಖ್ಯೆಯಲ್ಲೇನೂ ಕಡಿಮೆಯಾಗಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.