ADVERTISEMENT

ಮ್ಯೂಸಿಕ್‌ ಅಕಾಡೆಮಿ ಮದ್ರಾಸ್‌ ಸಂಗೀತ ಕೋರ್ಸ್‌ಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 29 ಮೇ 2025, 16:22 IST
Last Updated 29 ಮೇ 2025, 16:22 IST
<div class="paragraphs"><p>ಅರ್ಜಿ ಆಹ್ವಾನ</p></div>

ಅರ್ಜಿ ಆಹ್ವಾನ

   

ಬೆಂಗಳೂರು: ಕರ್ನಾಟಕ ಸಂಗೀತದಲ್ಲಿನ ಅಡ್ವಾನ್ಸ್ಡ್‌ ಡಿಪ್ಲೊಮಾ ಕೋರ್ಸ್‌ಗೆ ‘ದಿ ಮ್ಯೂಸಿಕ್ ಅಕಾಡೆಮಿ ಮದ್ರಾಸ್‌’ ಅರ್ಜಿ ಆಹ್ವಾನಿಸಿದೆ. ಇದು ಮೂರು ವರ್ಷಗಳ ಕೋರ್ಸ್‌.

ಅರ್ಜಿ ಸಲ್ಲಿಸಲು ಜೂನ್‌ 25 ಕಡೆಯ ದಿನ. ಜುಲೈನಿಂದ ತರಗತಿಗಳು ಆರಂಭವಾಗಲಿದ್ದು, ‘ದಿ ಮ್ಯೂಸಿಕ್‌ ಅಕಾಡೆಮಿ’ಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ತರಗತಿಗಳು ನಡೆಯುತ್ತವೆ.

ADVERTISEMENT

12ನೇ ತರಗತಿ ಉತ್ತೀರ್ಣರಾಗಿರುವ, 18ರಿಂದ 30 ವರ್ಷ ವಯಸ್ಸಿನ ನಡುವೆ ಇರುವವರು ಈ ಕೋರ್ಸ್‌ಗೆ ಸೇರಲು ಅರ್ಹರು. ಕೋರ್ಸ್‌ ಸೇರಲು ಬಯಸುವವರಿಗೆ ವರ್ಣಗಳು, ಕೃತಿಗಳನ್ನು ಹಾಡಲು ಬರಬೇಕು, ಅವರಿಗೆ ತಕ್ಕಮಟ್ಟಿಗೆ ಸಂಗೀತದ ಮನೋಧರ್ಮ ಇರಬೇಕು ಎಂದು ಪ್ರಕಟಣೆ ತಿಳಿಸಿದೆ.

ಅರ್ಜಿ ನಮೂನೆಗಳನ್ನು ಅಕಾಡೆಮಿಯ ವೆಬ್‌ಸೈಟ್‌ ಮೂಲಕ ಪಡೆದುಕೊಳ್ಳಬಹುದು. ಅಭ್ಯರ್ಥಿಗಳು ಅರ್ಜಿಯನ್ನು ತಮ್ಮ ವೈಯಕ್ತಿಕ ವಿವರ ಮತ್ತು ಸಂಗೀತ ತರಬೇತಿ ವಿವರಗಳ ಜೊತೆ ಇ–ಮೇಲ್‌ ಮೂಲಕ ಕಳುಹಿಸಬೇಕು.

ವೆಬ್‌ಸೈಟ್‌ ವಿಳಾಸ: www.musicacademymadras.in ದೂರವಾಣಿ ಸಂಖ್ಯೆ: 044-2811
2231, 2811 6902, 2811 5162.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.